ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆಯಾದ 16 ತಿಂಗಳುಗಳ ನಂತರ ನಡೆಯುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಅಂತಿಮ ಹಂತ ತಲುಪಿದ್ದು. ಯಾರಿಗೆ ಪಟ್ಟ ಒಲಿಯಲಿದೆ ಎನ್ನುವುದು ಬಹುತೇಕ ಖಚಿತವಾಗಿದೆ.
ಮೇಯರ್ ಸ್ಥಾನಕ್ಕೆ ವಾರ್ಡ್ 57 ರ ನಗರಸೇವಕಿ ಶೋಭಾ ಸೋಮನಾಚೆ ಹೆಸರು ಅಂತಿಮವಾಗಿದ್ದು ಉಪ ಮೇಯರ್ ಸ್ಥಾನಕ್ಕೆ ವಾರ್ಡ್ -33 ರ ರೇಶ್ಮಾ ಪಾಟೀಲ್ ಅಂತಿಮ ಎಂದು ಹೇಳಲಾಗುತ್ತಿದೆ. ಪಕ್ಷದ ಚಿಹ್ನೆಗಳ ಅಡಿಯಲ್ಲಿ ನಡೆದಿದ್ದ ಮಹಾನಗರ ಪಾಲಿಕೆಗೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.ಈಸಲವೂ ಕನ್ನಡಿಗರಿಗೆ ಹಿನ್ನಡೆ ಯಾಗಿದೆ ಕನ್ನಡ ಪರ ಸಂಘಟನೆಗಳು ಬೇಸರ ವ್ಯಕ್ತ ಪಡಿಸಿವೆ.