




ಬೆಳಗಾವಿ: ನಮ್ಮ ಕಾನೂನುಗಳು ಅದೆಷ್ಟೆ ಬಿಗಿಯಾಗಿದ್ರು ಸಹ ಕೆಲ ಅಧಿಕಾರಿಗಳ ನಿರ್ಲಕ್ಷ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ..ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಬಾಲಕಿಯರ ರಕ್ಷಣೆ ಕೇಂದ್ರಕ್ಕೆ ನುಗ್ಗಿದ್ದ ಓರ್ವ ಯುವಕ ಚಾಕು ತೋರಿಸಿ ಬಾಲಕಿಯನ್ನು ಅಪಹರಿಸಿ ಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ 13 ವರ್ಷದ ಬಾಲಕಿಯನ್ನು ಯುವಕ ಓರ್ವ ಬಾಲ್ಯ ವಿವಾಹವಾಗಿದ್ದಾನೆ. ಬಾಲಕಿ 13 ನೇ ವಯಸ್ಸಿನಲ್ಲೇ ಗರ್ಭಿಣಿ ಆಗಿರುವ ಕಾರಣ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿನ ಬರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸೃಷ್ಟಿ ಸಂಸ್ಥೆಯ ವಿದ್ಯಾರ್ಥಿನಿಲಯಲ್ಲಿ ಬಾಲಕಿಯನ್ನು ಇರಿಸಲಾಗಿತ್ತು. ಆದ್ರೆ ಆಕೆಯ ಗಂಡ ಚಿಕ್ಕಪ್ಪ ಎಂದು ಹೇಳಿಕೊಂಡು ಜುಲೈ 31 ರಂದು ರಕ್ಷಣಾ ಕೇಂದ್ರ ಅಧಿಕಾರಿಗಳಿಗೆ ಚಾಕು ತೋರಿಸಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಈ ಸೃಷ್ಠಿ ಕೇಂದ್ರದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೆ ಬಾಲಕಿ ಅಪಹರಣ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಅಪ್ರಾಪ್ತೆಯ ಅಪಹರಣವಾದರೂ ತಡ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಆರೋಪ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ.. ಈ ಘಟನೆಯ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ನೀಡಿಲ್ಲ. ಜೊತೆಗೆ ಈ ಕೇಂದ್ರದಲ್ಲಿ ಯಾವುದೇ ಭದ್ರೆತೆಗೆ ಇಲ್ಲದಿರುವೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಬಾಲಕಿಯ ಅಪಹರಣ ಜು ಲೈ ,31 ರ ಸಂಜೆ 6 ಗಂಟೆಗೆ ಆಗಿದ್ದು, ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿ ಜೈಲಿಗೆ ಕಳುಹಿಸಿದ್ದರೆ,ಬಾಲಕಿಯನ್ನು ರಕ್ಷಿಸಿ ಮತ್ತೆ ಮಕ್ಕಳ ರಕ್ಷಣಾ ಘಟಕದಲ್ಲಿ ಇರಿಸಲಾಗಿದೆ.ಒಟ್ಟಿನಲ್ಲಿ ಮಾಹಿತಿ ಪ್ರಕಾರ ಈ ಹಿಂದೆಯೂ ಈ ಸೃಷ್ಠಿ ಕೇಂದ್ರದ ಅವಸ್ಥೆ ಬಗ್ಗೆ ಗಮನ ಹರಿಸಿಕೊಳ್ಳಲು ಸ್ಥಳೀಯ ಪೊಲೀಸರು ಸೂಚನೆ ನೀಡುತ್ತಾ ಬಂದಿದ್ದಾರೆ ಎನ್ನಲಾಗಿದೆ.ಆದರೆ ಅಲ್ಲಿರುವ ಅಧಿಕಾರಿಗಳು ಯಾವುದಕ್ಕೂ ಕ್ಯಾರೆ ಅನ್ನದೆ ಯಾವುದೇ ಸೂಕ್ತ ಭದ್ರತೆ ಮಾಡಿಕೊಂಡಿಲ್ಲ ಎನ್ನಲಾಗಿದೆ.. ಹೀಗಾಗಿ ಮುಂದೆ ಆದರೂ ಈ ರೀತಿ ಘಟನೆ ನಡೆಯದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.










