ಜಿಲ್ಲೆಬೆಳಗಾವಿ

ಸಾರಿಗೆ ನೌಕರರ ಮುಷ್ಕರ‌ದ ಹಿನ್ನೆಲೆ ಬಸ್ ಬಂದ್ ಬೆಳಗಾವಿಯಲ್ಲಿ ಪ್ರಯಾಣಿಕರ ಪರದಾಟ

ಬೆಳಗಾವಿ:

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜನರಿಗೆ ಮುಷ್ಕರದ ‌ಬಿಸಿ ತಟ್ಟಿದೆ. ಬಹುತೇಕ ಸಿಬ್ಬಂಧಿ ಇಂದು ನೌಕರಿಗೆ ಗೈರು ಗಾಜರಾಗಳು ಪ್ಲಾನ್ ಮಾಡಿದ್ದಾರೆ. ಬೆಳಗಾವಿಯಲ್ಲಿ ನಿತ್ಯ 700 ಬಸ್ಸುಗಳು ಕಾರ್ಯಾಚರಣೆ ಮಾಡುತ್ತಿದ್ದವು.‌ಚಿಕ್ಕೋಡಿ ಭಾಗದಲ್ಲಿ 668 ಬಸ್ಗಳ ಓಡಾಡ ಇತ್ತು. ಎರಡೂ ಕಡೆಗಳಲ್ಲಿ ನಿತ್ಯ 4300 ಕ್ಕೂ ಅಧಿಕ ಜನ ಸಿಬ್ಬಂಧಿ ಕಾರ್ಯ ನಿರ್ವಹಿಸುತ್ತಿದ್ದರು. ಸಧ್ಯ ಈ ವರೆಗೆ ಡಿಪೋದಿಂದ ಬಸ್ಸುಗಳು ಹೊರಗೆ ಬಂದಿಲ್ಲ.‌ದೂರದ ಊರುಗಳಿಂದ ಬರುವ ಬಸ್ಸುಗಳು ಮಾತ್ರ ಬಸ್ ನಿಲ್ದಾಣಕ್ಕೆ ಆಗಮಿಸಿವೆ. ಅಲ್ಲದೆ ಇಂದು ಸಾರಿಗೆ ಮುಷ್ಕರ ಹಿನ್ನೆಲೆ ಬೆಳಗಾವಿ ಬಸ್ ನಿಲ್ದಾಣಕ್ಕೆ ಮಾರ್ಕೇಟ್ ಠಾಣೆಯ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಮಾರ್ಕೇಟ್ ಠಾಣೆಯ ಓರ್ವ ಸಿಪಿಐ ಮೂವರು ಪಿಎಸ್ಐ ಸೇರಿ ಸಿಬ್ಬಂಧಿಗಳು ಆಗಮಿಸಿದ್ದಾರೆ. ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ಓಡಾಟದ ಮೇಲೆ ಸಧ್ಯ ಪೊಲೀಸರು ನಿಗಾ ವಹಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

TV24 News Desk
the authorTV24 News Desk

Leave a Reply