

ಬೆಳಗಾವಿ:
ಬೆಳಗಾವಿ ನಗರದಲ್ಲಿ ಇನ್ನು ಮುಂದೆ ಪ್ರತಿಭಟನೆ ಮಾಡೊಕೆ ಅನುಮತಿ ಕಡ್ಡಾಯಗೊಳಿಸಲಾಗಿದೆ.ದಿಢೀರ್ ಪ್ರತಿಭಟನೆಗಳಿಂದ ಜನರಿಗಾಗುತ್ತಿರುವ ಸಮಸ್ಯೆಯನ್ನುಗಂಡು ಬೆಳಗಾವಿ ನಗರ ಪೊಲೀಸರು ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ.ಅನಧಿಕೃತ ಪ್ರತಿಭಟನೆ ಮಾಡಿದ್ರೆ ಮುಲಾಜಿಲ್ಲದೇ ಕಾನೂನು ಕ್ರಮವಹಿಸುತ್ತೆವೆ ಎಂದು ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಅಧಿಕೃತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು ಪ್ರತಿಭಟನೆ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ
ವಿಡಿಯೋ ಹೇಳಿಯಲ್ಲಿ ಮಾತನಾಡಿದ ಅವರು
ಸಾಮಾಜಿಕ ಜಾಲತಾಣದಲ್ಲಿ ಕೆಲ ಸಂಘಟನೆಗಳು ದಿಢೀರ್ ಪ್ರತಿಭಟನೆಗೆ ಕರೆ ನೀಡುತ್ತಿವೆ.
ಇದರಿಂದ ವಾಹನ ಸಂಚಾರ ಸಮಸ್ಯೆ, ಸಾರ್ವಜನಿಕ ಕಿರಿಕಿರಿ ಉಂಟಾಗುತ್ತಿದೆ.ಕಾನೂನು, ಸುವ್ಯವಸ್ಥೆ ನಿರ್ವಹಣೆಗೂ ಸಮಸ್ಯೆಯಾಗುತ್ತಿದೆ.ಹೀಗಾಗಿ ಪ್ರತಿಭಟನೆ ಮುನ್ನವೇ ಪೊಲೀಸ್ ಪರವಾಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.ದಿಢೀರ್ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿ ಏನೇ ಸಮಸ್ಯೆಗಳಾದ್ರೂ ಅದಕ್ಕೆ ಹೊಣೆಗಾರರನ್ನಾಗಿ ಪ್ರತಿಭಟನಾಕಾರರನ್ನೇ ಮಾಡಲಾಗುತ್ತದೆ.ಅವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.












