Uncategorized

ಎಸ್ ಐ ಆರ್ ಪ್ರಕ್ರಿಯೇಯಲ್ಲಿ ಬೆಳಗಾವಿ ರಾಜ್ಯಕ್ಕೆ ನಂ1! ಶೇಖಡಾ 80.60 ರಷ್ಟು ಸಾಧನೆ!

ಬೆಳಗಾವಿ:

ರಾಜ್ಯದಲ್ಲಿ ನಡೆಯುತ್ತಿರುವ ಎಸ್ ಐ ಆರ್ ಪ್ರಕ್ರಿಯೇ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಈವರಗೆ ಎಸ್ ಐ ಆರ್ ನಲ್ಲಿ ಆದ ಬೆಳವಣಿಗೆಗಳ ಕುರತು ಬೆಳಗಾವಿಯಲ್ಲಿ ಡಿಸಿ ಮಹಮ್ಮದ್ ರೋಷನ್‌ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಬೆಳಗಾವಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 41ಲಕ್ಷ 7ಸಾವಿರ ಜನ ಮತದಾರರಿದ್ದು ಈಗಾಗಲೇ ಅವರಿಗೆಲ್ಲ ಇನುಮ್ಯುರೆಷನ್ ಫಾರ್ಮ್ ವಿತರಣೆ ಮಾಡಿದ್ದೇವೆ.
ಬಿಎಲ್ಓಗಳು ಮನೆ ಮನೆಗೆ ಹೋಗಿ ವಿತರಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಶೇ100ರಷ್ಟು ಫಾರ್ಮ್ ವಿತರಣೆ ಮಾಡಿದ್ದೇವೆ ಎಂದರು. ಅಲ್ಲದೇ ಮೊದಲ ಹಂತದಲ್ಲಿ ಅನಕಲೆಕ್ಟೆಬಲ್ ತೋರಿಸಿಲ್ಲ ಹೀಗಾಗಿ ಅನಕಲೆಕ್ಟೆಬಲ್ ಫಾರ್ಮ್ ಉಳಿಸಿದ್ದೇವೆ.ಪ್ರತ್ಯೇಕ ವೋಟಿಂಗ್ ಇದ್ದರೆ ತಕ್ಷಣವೇ ಅವರು ಬಿಎಲ್ಓಗಳನ್ನು ಭೇಟಿ ಮಾಡಬೇಕು ಇನ್ನು ನಾಲ್ಕು ದಿನಗಳ ಕಾಲ ಮಾತ್ರ ಅವಕಾಶವಿದೆ.ಇಲ್ಲವಾದರೆ ಡೆತ್, ಹಾಜರಾತಿ ಇಲ್ಲ ಅಂತಾ ತೋರಿಸಬೇಕಾಗುತ್ತದೆ ಎಂದರು.ಇನ್ನು ಬೆಳಗಾವಿಯಲ್ಲಿ ಸದ್ಯ 80ರಷ್ಟು ಫಾರ್ಮ್ ಗಳು ವಾಪಸ್ ಬಂದಿವೆ.ಬಂದಿರೋ ಫಾರ್ಮ್ ಗಳನ್ನು ಡಿಜಿಟಲ್ ಮಾಡುತ್ತಿದ್ದೇವೆ ಈಗಾಗಲೇ ಒಟ್ಟು 33ಲಕ್ಷ 10ಸಾವಿರ 390 ಜನ ವೋಟು ಡಿಜಿಟೈಲೈಷನ್ ಮಾಡಿದ್ದೇವೆ.ಜಿಲ್ಲೆಯಲ್ಲಿ ನಾವು 80.60%ರಷ್ಟು ಸಾಧನೆ ಮಾಡಿದ್ದೇವೆ.ಪ್ರತಿ ಎರಡು ತಾಸಿಗೊಮ್ಮೆ ಒಂದೂವರೆ ಪರ್ಸೆಂಟ್ ಹೆಚ್ಚಾಗುತ್ತಿದೆ.ಇವತ್ತು ವಿವಿಧ ರಾಜಕೀಯ ಮುಖಂಡರ ಜೊತೆಗೆ ಸಭೆ ಮಾಡಿದ್ದೇನೆ ಕೆಲ ನ್ಯೂನತೆಗಳನ್ನು ಬಗ್ಗೆ ಹೇಳಿದ್ದಾರೆ ಡೆತ್, ಹಾಜರಾತಿ ಇರದವರ ಮಾಹಿತಿ ಕೊಡೊಕೆ ಹೇಳಿದ್ದಾರೆ.ಎಸ್ಐಆರ್ ಪ್ರಕ್ರಿಯೆಯಲ್ಲಿ ಈವರೆಗೆ 98ಸಾವಿರ ಡೆತ್ ಆಗಿರೋದು ಕಂಡು ಬಂದಿದೆ.4021 ಜನ ಪತ್ತೆಯಾಗಿಲ್ಲ.1,06,539ಜನ ಶಾಶ್ವತ ಸ್ಥಳಾಂತರ
595ಜನ ಇತರೆ ಇದ್ದಾರೆ.2,42,566 ಜನ ಇನುಮ್ಯೂರೆಷನ್ ಫಾರ್ಮ್ ವಾಪಸ್ ಬರಬೇಕಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

TV24 News Desk
the authorTV24 News Desk

Leave a Reply

error: Content is protected !!