ಜಿಲ್ಲೆಬೆಳಗಾವಿ ನಗರ

ಅಪ್ರಾಪ್ತ ಮಕ್ಕಳ ಕೈಲಿ ಬೈಕ್‌ ಕೊಡುವ ಪೋಷಕರೆ ನಗರ ಪೊಲೀಸ್ ಆಯುಕ್ತರ ಸೂಚನೆಯನ್ನೊಮ್ಮೆ ಕೇಳಿ!

ಬೆಳಗಾವಿ:

ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಮುನ್ನ ಹುಷಾರ್! ಬೆಳಗಾವಿ ನಗರದ ಪೋಷಕರಿಗೆ ಈ ರೀತಿಯ ಕಟ್ಟು ನಿಟ್ಟಿನ ಸೂಚನೆಯನ್ನು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರೆಸೆ ನೀಡಿದ್ದಾರೆ.ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು ಬೆಳಗಾವಿ ಮಹಾನಗರದಲ್ಲಿ ಟ್ರಾಫಿಕ್ ಒಂದು ದೊಡ್ಡ ಸಮಸ್ಯೆ ಆಗ್ತಿದೆ. ಸ್ಕೂಲ್ ಮತ್ತು ಕಾಲೇಜು ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೆವೆ.
ಪಾರ್ಕಿಂಗ್ ಗಾಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಾಡಿಕೊಳ್ತಿವಿ ಎಂದು ಶಾಲಾ ಕಾಲೇಜು ಅಡಳಿತ ಮಂಡಳಿ ಈಗಾಗಲೇ ಹೇಳಿದ್ದಾರೆ.
ನಮ್ಮಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ಪತ್ರ ಹೋಗಿದೆ.
ವಿದ್ಯಾರ್ಥಿಗಳು ರಸ್ತೆಯ ಮೇಲೆ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡುತಿದ್ದಾರೆ ಇದರಿಂದಾಗಿ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಆಗ್ತಿದೆ ಕೆಲವು ಶಾಲಾ ಕಾಲೇಜುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಅಲ್ಲಿ ಪೇಡ್ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. 18 ವರ್ಷದ ಒಳಗನ ಮಕ್ಕಳು ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಬರ್ತಿದ್ದಾರೆ ಅಂತವರ ವಿರುದ್ಧ ಸೆಕ್ಷನ್ 4 ಭಾರತೀಯ ಮೋಟಾರು ವಾಹನ ಖಾಯ್ದೆ ಪ್ರಕಾರ 18 ವರ್ಷ ಕಡ್ಡಾಯವಿದೆ.ಭಾರತೀಯ ಮೋಟಾರು ವಾಹನ ಕಾಯ್ದೆ 199a ಮೋಟಾರ್ ವಾಹನ ಕಾಯ್ದೆ ಪಾಲಿಸದಿದ್ದರೆ,ಮೂರು ವರ್ಷ ಜೈಲು 25 ಸಾವಿರ ಫೈನ್ ಇದೆ.
ಹೀಗಾಗಿ ಬೆಳಗಾವಿ ಪೋಷಕರು ಮಕ್ಕಳ ಕೈಲಿ ಬೈಕ್ ಕೊಡುವ ಮುನ್ನ ಇದು ಗಮನದಲ್ಲಿರಲಿ.
ಪ್ರೈವೇಟ್ ಸೆಕ್ಯೂರಿಟಿ ಗಾರ್ಡ್ ಗಳಿಗೆ ಟ್ರಾಫಿಕ್ ರೂಲ್ಸ್ ಟ್ರೇನಿಂಗ್ ಕೊಡ್ತಿವಿ ಸೈಲೆನ್ಸರ್ ಮಾಡಿಫೈ ಮಾಡಿ ದೊಡ್ಡ ಧ್ವನಿ ಮಾಡಿ ಓಡಾಡೋರ ವಿರುದ್ದ ಕ್ರಮ ಕೈಗೊಳ್ಳುತ್ತೆವೆ ಎಂದು ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ ಹೇಳಿದರು.

TV24 News Desk
the authorTV24 News Desk

Leave a Reply