ಬೆಳಗಾವಿ

ಖಾನಾಪೂರ ಪೊಲೀಸರ ಭರ್ಜರಿ ಬೇಟೆ

ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ, 65,000/ ರೂಪಾಯಿ ಮೌಲ್ಯದ ಗಾಂಜಾ ವಶ
ಖಾನಾಪೂರ: ದಿನಾಂಕ: 21/03/2024 ರಂದು ಬೆಳಗ್ಗೆ 11.45 ಗಂಟೆಯ ಸುಮಾರಿಗೆ ಖಾನಾಪೂರ ಪಟ್ಟಣದ ಪಾರಿಶ್ಚಾಡ ಕ್ರಾಸ ಕಡೆಗೆ ಇರುವ ಹೈವೆ ಅಡ್ಡ ಅಂಡರಪಾಸ್ ಸಮೀಪ ಒಬ್ಬನು ಅಕ್ರಮವಾಗಿ ಸ್ವಂತ ಲಾಭಕ್ಕಾಗಿ ಮಾದಕ ಪದಾರ್ಥವಾದ ಗಾಂಜಾವನ್ನು ಮಾರಾಟ ಮಾಡುತ್ತಾ ನಿಂತಿರುವ ಖಚಿತ ಮಾಹಿತಿಯನ್ನು ಸಂಗ್ರಹಿಸಿದ ಶ್ರೀ ರಾಮಚಂದ್ರ ನಾಯಕ, ಪೊಲೀಸ್ ಇನ್ಸಪೆಕ್ಟರ ಖಾನಾಪೂರ ಪೊಲೀಸ್ ಠಾಣೆ ರವರು ಶ್ರೀ ರವಿ ಡಿ ನಾಯ್ಕ, ಡಿ.ಎಸ್.ಪಿ ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ಶ್ರೀ ಗಿರೀಶ ಎಂ. ಪಿ.ಎಸ್.ಐ ಖಾನಾಪೂರ ಹಾಗೂ ಖಾನಾಪೂರ ಪೊಲೀಸ್ ಸಿಬ್ಬಂದಿಗಳಾದ ಜಯರಾಮ ಹಮ್ಮಣ್ಣವರ, ಜಗದೀಶ ಹುಬ್ಬಳ್ಳಿ, ಪಾಂಡುರಂಗ ತುರಮರಿ, ಈಶ್ವರ ಜಿನ್ನವ್ವಗೋಳ, ಶಿವಾನಂದ ಸಾತಪ್ಪನವರ ಇವರೊಂದಿಗೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ಆರೋಪಿತನ ಕಡೆಯಿಂದ ಸುಮಾರು 65.000/ ರೂಪಾಯಿ ಬೆಲೆಯ 01 ಕೆ.ಜಿ ಯಷ್ಟು ಒಣಗಿದ ಗಾಂಜಾ ಪದಾರ್ಥವನ್ನು ಮತ್ತು ಗಾಂಜಾ ಮಾರಾಟ ಮಾಡಿದ 1000/ ರೂಪಾಯಿ ಹಣ. ಸುಮಾರು 10.000/ ರೂಪಾಯಿ ಬೆಲೆಯ ಸ್ಕೂಟಿಯನ್ನು ಜಪ್ತ ಮಾಡಿದ್ದು, ಈ ಆರೋಪಿ ಹಾಗೂ ಈ ಆರೋಪಿತನಿಗೆ ಗಾಂಜಾ ಕೊಟ್ಟ ಮತ್ತೊಬ್ಬ ಆರೋಪಿತನ ಮೇಲೆ : 56/2024 00: 20 [2] 2.4.4.2 -1985 ಅಡಿಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿ ಆರೋಪಿತನಿಗೆ ಘನ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಇನ್ನೊಬ್ಬ ಆರೋಪಿತನ ಪತ್ತೆ ಕಾರ್ ಮುಂದುವರೆದಿರುತ್ತದೆ. ಈ ಕಾವ್ಯಕ್ಕೆ ಮಾನ್ಯ ಎಸ್.ಪಿ ಬೆಳಗಾವಿ ರವರು ಪ್ರಶಂಸೆ

ವ್ಯಕ್ತಪಡಿಸಿರುತ್ತಾರೆ.

TV24 News Desk
the authorTV24 News Desk

Leave a Reply