ಬೆಳಗಾವಿ:
ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಪಟ್ಟಂತೆ ಎಂದಿನಂತೆ ಹಿರಿಯ ಶಾಸಕ ಲಕ್ಷ್ಮಣ ಸವದಿ ತಮ್ಮ ಘಾಂವಟಿ ಭಾಷೆಯಲ್ಲಿಯೇ ಉತ್ತರ ನೀಡಿದ್ದಾರೆ. ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಖಾಡ ಇನ್ನೂ ರೆಡಿಯಾಗಿಲ್ಲ ಕುಸ್ತಿ ಆಡೋಕೆ ಅಖಾಡ ರೆಡಿಯಾದ ಮೇಲೆ ಪೈಲ್ವಾನರು ತಯಾರಾಗ್ತಾರೆ ಆದರೆ ಅಖಾಡವೇ ಇನ್ನೂ ರೆಡಿಯಾಗಿಲ್ಲ ಎಂದು ಮಾರ್ಮಿಕವಾಗಿಯೇ ಉತ್ತರಿಸಿದರು. ಇನ್ನು ಕೊಲ್ಹಾಪುರದ ಕನ್ಹೇರಿಮಠದಲ್ಲಿ ನಡೆದ ಸಭೆಯ ವಿಚಾರವಾಗಿ ಮಾತನಾಡಿದ ಅವರು ನಾವು ಧರ್ಮದ ಕುರಿತು ಚರ್ಚೆ ಮಾಡಿದ್ದೆವೆ ಎಂದರು.ರಾಜ್ಯದಲ್ಲಿ ಪ್ರಾರಂಭವಿರುವ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಎನು ಬರೆಸಬೇಕು ಎನ್ನುವುದು ಮೂಲ ಪ್ರಶ್ನೆಯಾಗಿದೆ.ಉಪಪಂಗಡಗಳು ಬಹಳ ಇವೆ. ಉಪಪಂಗಡಗಳ ಹೆಸರು ಬರೆಸಬೇಕೋ ಅಥವಾ ಒಟ್ಟಾರೆ ವೀರಶೈವ ಲಿಂಗಾಯತ ಎಂದು ಬರೆಸಬೇಕೋ ಎಂದು ಗಂಭೀರವಾಗಿ ಚರ್ಚಿಸುವ ಸಭೆಯಾಗಿದೆ. ಅದು ಇಲ್ಲೂ ಆಗಿದೆ ಹಾಗೂ ದಾವಣಗೆರೆಯಲ್ಲಿ ಪಂಚಪೀಠಾಧ್ಯಕ್ಷರ ಸಮ್ಮುಖದಲ್ಲೂ ಸಹ ಒಂದು ಶೃಂಗ ಸಭೆಯೂ ಆಗಿದೆ.ಅಂತಿಮವಾಗಿ ತೀರ್ಮಾಣ ಆಗೋದು ಬಾಕಿ ಇದೆ. ಧರ್ಮದ ಕಾಲಂನಲ್ಲಿ ಎನು ಬರೆಸಬೇಕು, ಜಾತಿ ಕಾಲಂ ನಲ್ಲಿ ಎನು ಬರೆಸಬೇಕು ಎಂದು ಒಂದು ಉಪಸಂಹಾರಕ್ಕೆ ಬರಬೇಕಾಗಿತ್ತು ಅದರ ಕುರಿತು ಹೆಚ್ಚು ನಾವು ಚರ್ಚೆ ಮಾಡಿದ್ದೆವೆ.ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನ ಚುನಾವಣೆಯನ್ನು ನಾವು ಗಂಭೀರವಾಗಿ ಇನ್ನೂ ಪರಿಗಣಿಸಿಲ್ಲಣ, ಹೆಚ್ಚಿನ ಸಮಯದಲ್ಲಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಚುನಾವಣೆ ಮಾಡಿಕೊಂಡು ಬಂದಿದ್ದೆವೆ. ಹೆಚ್ಚಿನ ಸಮಯದಲ್ಲಿ ನಾವು ಅವಿರೋಧ ಆಯ್ಕೆ ಮಾಡಿಕೊಂಡು ಬಂದಿದ್ದೆವೆ. ಆಗದ ಸಂದರ್ಭದಲ್ಲಿ ಚುನಾವಣೆ ಮಾಡಿದ್ದೆವೆ.ಆ ಬಗ್ಗೆ ಮಾತನಾಡಲು ಇನ್ನೂ ಕಾಲ ಪಕ್ವವಾಗಿಲ್ಲ ಕಾಲ ಪಕ್ವವಾದ ನಂತರ ಆ ಚುನಾವಣೆಯ ಕುರಿತು ನಾನು ಪ್ರತಿಕ್ರಿಯೇ ನೀಡುತ್ತೆನೆ ಎಂದಿದ್ದಾರೆ.


