Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ರಾಜ್ಯ

ಆಕಸ್ಮಿಕ ಬೆಂಕಿ 3 ಜನ ಸಜೀವ ದಹನ..!

ಶಿವಮೊಗ್ಗ: ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ ಮೂವರು ಸಜೀವವಾಗಿ ದಹನಗೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಸಮೀಪದ ಕೆಕೋಡ್‍ನಲ್ಲಿ ಇಂದು ಮುಂಜಾನೆ ನಡೆದಿದೆ.

ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್(30) ಮೃತ ದುರ್ದೈವಿಗಳು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇನ್ನೊಬ್ಬ ಪುತ್ರ ಭರತ್ (28)ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರ್ಚಕರಾಗಿದ್ದ ರಾಘವೇಂದ್ರ ಅವರು ಕುಟುಂಬ ಸಮೇತ ಹೊಸನಗರ ರಸ್ತೆಯ ಅರಳಸುರಳಿ ಗಣಪತಿ ಕಟ್ಟೆ ರೈಸ್ ಮಿಲ್ ಸಮೀಪ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಇತ್ತೀಚೆಗೆ ಮನೆಯ ಕೋಣೆಯಲ್ಲಿ ಕಟ್ಟಿಗೆ ಸಂಗ್ರಹಿಸಿಟ್ಟಿದ್ದರು. ಅದಕ್ಕೆ ಬೆಂಕಿ ಬಿದ್ದು ಪೂರ್ತಿ ಮನೆ ಆವರಿಸಿ ಈ ಅವಘಡ ಸಂಭವಿಸಿದೆ.

TV24 News Desk
the authorTV24 News Desk

Leave a Reply

error: Content is protected !!