



ಬೆಳಗಾವಿ:
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಎದುರಿಗೆ ನಡೆದ ಪ್ರತಿಭಟನೆಯಲ್ಲಿ ಶಾಸಕ ಬಿಬಿ ಹರೀಶ್ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಕೈಗೊಂಡಿದೆ. ಬೆಳಗಾವಿಯಲ್ಲೂ ಸಹ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಯುವಕರು ನಡೆಸುತ್ತಿರುವ ಪ್ರತಿಭಟನೆಯನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕಾಂಗ್ರೇಸ್ ನಾಯಕರು ಮುಂದಾಗಿದ್ದಾರೆ. ಪ್ರತಿಭಟನೆಗೆ ಹೊರದೇಶಗಳಿಂದ ಹಣ ಬರುತ್ತಿದೆ. ಹೀಗಾಗಿ ನರೇಂದ್ರ ಮೋದಿ ಸರ್ಕಾರವನ್ನು ಈ ಪ್ರಕರಣದಲ್ಲಿ ಹನಿಯಬೇಕು ಎಂದು ಕಾಂಗ್ರೇಸ್ ಹೊಂಚು ಹಾಕುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ಇನ್ನು ನಿನ್ನೆ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಕೇವಲ ಒಂದೇ ಸಮುದಾಯದ ಯುವಕರು ಭಾಗಿಯಾಗಿದ್ದರು ಎಂದು ಮಾಜಿ ಶಾಸಕ ಅನೀಲ್ ಬೆನಕೆ ಕಿಡಿಕಾರಿದರು. ದೇಶಾದ್ಯಂತ ಇದೇ ಪ್ರಕರಣವನ್ನು ಮುಂದೆ ಇಟ್ಟುಕೊಂಡು ಅರಾಜಕತೆ ಸೃಷ್ಟಿ ಮಾಡಲು ಕಾಂಗ್ರೇಸ್ ಮುಂದಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಮಾತ್ರವಲ್ಲದೇ ಬೇರೆ ಬೇರೆ ಸಮಯದಲ್ಲಿ ಬೇರೇ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಘಟನೆಗಳು ನಡೆದಿವೆ.ಅಲ್ಲಿ ಕಾಂಗ್ರೇಸ್ ನಾಯಕರು ಹೋಗಿ ಪ್ರತಿಭಟನೆ ಮಾಡಿಲ್ಲ.ಈಗ ಪ್ರತಿಭಟನೆ ಮಾಡುತ್ತಿರುವುದು ಏಕೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದರು. ಇನ್ನು ನಿನ್ನೆ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ದೇಶದ ಪ್ರಧಾನಿಗಳ ವಿರುದ್ಧವಾಗಿ ಅವಾಚ್ಯ ಪದಗಳನ್ನು ಬಳಸಿ ಹಲವರು ಘೋಷಣೆ ಕೂಗಿದ್ದು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು. ಸದ್ಯ ದೆಹಲಿಯಲ್ಲಿ ಉಪವಾಸ ಕುಳಿತಿದ್ದ ಸೋನಮ್ ವಾಂಗ್ಚುಕ್ ಕೆಲ ಶರತ್ತುಗಳನ್ನು ಹಾಕಿ ಉಪವಾಸ ನಿರಶನ ಕೈ ಬಿಟ್ಟಿದ್ದಾರೆ. ಸದ್ಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಜಕೀಯ ರಾಡಿ ಎದ್ದಿದ್ದು ಎದ್ದು ಕಾಣುತ್ತಿದೆ.ಈ ರಾಜಕೀಯ ಬೇಗುದಿ ಇನ್ನೂ ಎಲ್ಲಿಗೆ ಹೋಗಿ ತಲುಪುತ್ತೆ ಕಾದು ನೋಡಬೇಕು ಆದರೆ ಭವಿಷ್ಯದ ಕುರಿತು ನೂರಾರು ಕನಸು ಕಟ್ಟುಕೊಂಡಿದ್ದ ಕೆಲ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ತವರ ಕುಟುಂಬಗಳಿಗೆ ಅಧಿಕಾರದಲ್ಲಿದ್ದವರು ಹಾಗೂ ಪ್ರತಿಭಟನೆಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವರೂ ಉತ್ತರಿಸಬೇಕಿದೆ.











