Uncategorized

ನೋಡ ನೋಡುತ್ತಿದ್ದಂತೆ ಕುಸಿಯುತ್ತಿದೆ ಮುಂಬೈನಲ್ಲಿ ನೆಲ! ನಿರಂತರ ಮಳೆಗೆ ಜನ ವಿಲವಿಲ!

ಮಹಾರಾಷ್ಟ್ರ:

ಮಹಾರಾಷ್ಟ್ರದ ಮುಂಬೈನಲ್ಲಿ ಧಾರಾಕಾರ ಮಳೆ ಶುರುವಾಗಿದೆ. ಇಷ್ಟು ‌ದಿನ ಮಳೆಯಾಗದೆ ಕಂಗೆಟ್ಟಿದ್ದ ಮುಂಬೈ ಮಹಾನಗರ ಜನರು ಎರಡೇ ದಿನಕ್ಕೆ ಈ ಮಳೆ ಯಾವಾಗ ನಿಲ್ಲುತ್ತೋ ಎಂದು ಪರಿತಪಿಸುವಂತಾಗಿದೆ. ಮುಂಬೈನ ಸೋನಾಪುರದಲ್ಲಿ ಭೂಮಿ ಕುಸಿದು ನಿಂತಿದ್ದ ವಾಹನವೇ ಕಂದಕ್ಕೆ ಉರುಳಿದೆ. ಅಲ್ಲದೇ ಪಕ್ಕದಲ್ಲಿಯೇ ಇದ್ದ ಕಟ್ಟಡವು ಕುಸಿದು ಬಿದ್ದಿರುವ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೋಡುಗರ ಎದೆ ಝಲ್ ಎನ್ನುವಂತಿವೆ‌. ಕಳೆದ ಎರಡು ದಿನಗಳಿಂದ ಶುರುವಾಗಿರುವ ಧಾರಾಕಾರ ಮಳೆಯಿಂದ ಮುಂಬೈ ಮಹಾನಗರಕ್ಕೆ ನಗರವೇ ಜಲನಗರವಾಗಿ ಮಾರ್ಪಾಡಾಗಿದೆ. ಎಲ್ಲಿ ನೋಡಿದರೂ ಸಹ ನೀರು ತುಂಬಿಕೊಂಡಿದ್ದು ಜನ ಪರದಾಡುತ್ತಿದ್ದಾರೆ. ಸದ್ಯ ಸೋನಾಪುರದ ಭಂಡುಪ ಎಂಬ ಸ್ಥಳದಲ್ಲಿ ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಿದ ಟಾಟಾ ಏಸ್ ವಾಹನ ಕುಸಿದು ಕಂದಕಕ್ಕೆ ಬಿದ್ದಿದೆ. ಇನ್ನು ನೋಡನೋಡುತ್ತದಂತೆ ಮನೆ ಕುಸಿದು ಕಂದಕದ ಒಳಗೆ ಕುಸಿದಿದೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿರುವ ಸಂಭವವೂ ಇದ್ದು ಕೆಲಗಡೆ ಯಾರಾದರೂ ಸಿಲುಕಿದ್ದಾರಾ ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡವೂ ಬಂದಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

TV24 News Desk
the authorTV24 News Desk

Leave a Reply