ರಾಜ್ಯ

ಬಿಜೆಪಿ-ಜೆಡಿಎಸ್ ಓಕೆ ಬಿಎಸ್ ವೈ ಯೂಟರ್ನ್ ಏಕೆ..! 

ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ  ಬಿಎಸ್ ವೈ ಲಾಬಿ
ಬೆಂಗಳೂರು: 2024ರ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಬಿಜೆಪಿಯಲ್ಲಿ ಭಾನುವಾರ ಗೊಂದಲ ಸೃಷ್ಟಿಯಾಗಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜೆಡಿಎಸ್  ಮುಖಂಡ  ಎಚ್‌ಡಿ ದೇವೇಗೌಡ ಭೇಟಿ ಮಾಡಿದ್ದರು, ಮೈತ್ರಿ ಒಪ್ಪಂದಕ್ಕೆ ಮುದ್ರೆ ಬಿದ್ದಿರುವುದನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಚಿತ ಪಡಿಸಿದ್ದರು. ಆದರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಯೂಟರ್ನ್ ಹೊಡೆದಿದ್ದರು.
“ಮೋದಿ ಬೇರೆ ಕೆಲಸಗಳಲ್ಲಿ ನಿರತರಾಗಿದ್ದರು. ಬಹುಶಃ ನಾಳೆ ಅಥವಾ ಮರುದಿನ ಮಾತುಕತೆ ನಡೆಯಲಿದೆ. ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ, ಕಾದು ನೋಡುತ್ತೇವೆ. ನಾನು ಮೊದಲೇ ಹೇಳಿದಂತೆ ಮೈತ್ರಿ ರೂಪುಗೊಂಡಿಲ್ಲ, ಈಗ ಕೂಡ ಮೈತ್ರಿಯ ಕಲ್ಪನೆಯು ಯಾವುದೇ ಆಕಾರವನ್ನು ಪಡೆದಿಲ್ಲ. ಎಲ್ಲವನ್ನೂ ಮೋದಿ ಮತ್ತು ಶಾ ನಿರ್ಧರಿಸುತ್ತಾರೆ ಎಂದ ಯಡಿಯೂರಪ್ಪ ಬಾಂಬ್ ಸಿಡಿಸಿದ್ದರು.
ಈ ಮದ್ಯ ಯಡಿಯೂರಪ್ಪ ಅವರು ತಮ್ಮ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ.ಎಸ್.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ
TV24 News Desk
the authorTV24 News Desk

Leave a Reply

error: Content is protected !!