Uncategorized

ಏನೇ ಆದರೂ ನಮ್ಮ ಮೇಲೆ ಆರೋಪ ಬರುತ್ತೆ! ಹೀಗಂದಿದ್ಯಾಕೆ ಸಚಿವ ಸತೀಶ್!

ಬೆಳಗಾವಿ:

ಯಮಕನಮರಡಿಯಲ್ಲಿ ನಡೆದಿದೆ ಎನ್ನಲಾದ ಸ್ವಾಮೀಜಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿದರು. ಇದು ಹಿಂದುಗಳ ಮೇಲೆ ದೌರ್ಜನ್ಯ ಎಂದು ಬಿಜೆಪಿ ಮುಖಂಡ ಮಾಡುತ್ತಿರುವ ಆರೋಪಕ್ಕೆ ಈಗ ಇದೊಂದು ಹೊಸಾದು ಆರಂಭ ಆಯಿತು ಎಂದು ಸಚಿವರು ಹೇಳಿದರು.
ಯಾರು ಯಾರ ಮೇಲೆ ಯಾಕೆ ಹಲ್ಲೆ ಮಾಡಿದ್ದಾರೆ ಎಂಬುದು ಅಲ್ಲಿಯೇ ಕೇಳಬೇಕು ಎಂದ ಸಚಿವರು ಖಾಲಿ ಇದ್ದವರು ಇಂತವುಗಳನ್ನು ಹುಟ್ಟು ಹಾಕುತ್ತಾರೆ ಎಂದು ಹೇಳುವ ಮೂಲಕ ಹೆಸರು ಹೇಳದೆ ಬಿಜೆಪಿ ಮುಖಂಡನಿಗೆ ಟಾಂಗ್ ನೀಡಿದರು.ಚುನಾವಣೆ ಹತ್ತರವಾದಂತೆ ಎಲ್ಲಾದಕ್ಕೂ ನಮ್ಮನ್ನೆ ಹೊಣೆ ಮಾಡಲಾಗುತ್ತೆ
ಎಮ್ಮೆ ನಾಯಿ ಸತ್ರು ನಮ್ಮ ಮೇಲೆಯೆ ಆರೋಪ ಬರುತ್ತೆ ಎಂದು ಸಚಿವರು ಲೇವಡಿ ಮಾಡಿದರು.2028ರ ಮೇವರೆಗೆ ಎಲ್ಲ ಆರೋಪಗಳು ಬರುತ್ತವೆ ಎಂದ ಸಚಿವರು ಮಾಧ್ಯಮದವರನ್ನೆ ಸ್ವಾಮೀಜಿಯವರ ಹೇಳಿಕೆಯನ್ನು ನೋಡಿದೀರಾ? ಎಂದು ಮರು ಪ್ರಶ್ನೆ ಮಾಡಿದರು. ಅಲ್ಲಿ ಕಮಿಟಿಯವರು,ಹಾಗೂ ಸ್ವಾಮೀಜಿಯವರು ಸಮಸ್ಯೆಯನ್ನು‌ಇತ್ಯರ್ಥ ಮಾಡುತ್ತಾರೆ ಎಂದರು.

TV24 News Desk
the authorTV24 News Desk

Leave a Reply