ಮಾರ್ಗರೇಟ್ ಲವರ್ ಆಗಿ ಕುಂದಾನಗರಿ ಕುವರ
ಬೆಂಗಳೂರು: ಹೌದು 8೦ ರ ದಶಕದಲ್ಲಿ ಇಡಿ ಭಾರತದ ಚಲನಚಿತ್ರ ರಂಗವೇ ಕನ್ನಡದ ಚಂದನವನದತ್ತ ನೋಡುವಂತೆ ಮಾಡಿದ್ದು ಕನ್ನಡದ ದೃಶ್ಯಕಾವ್ಯದ ಪಿತಾಮಹ ಪುಟ್ಟಣ್ಣ ಕಣಗಲ್ ಅವರ ನಾಗರಹಾವು ಅದರ ಚಿತ್ರದ ನಾಯಕ ಪಾತ್ರ ಈಗ್ಲೂ ತನ್ನದೆ ಆದ ಮಹತ್ವ ಹೊಂದಿದೆ ಅದುವೆ “ರಾಮಾಚಾರಿ” & ಮಾರ್ಗೆರೆಟ್ ಇವರಿಬ್ಬರ ಲವ್ ಸ್ಟೋರಿ ಆಗಿನ ಪ್ರತಿಯೊಬ್ಬ ಯುವಕರು ಮನಸ್ಸಿನಲ್ಲಿ ಅಚ್ಚಿ ಉಳಿದಂತೆ ಮಾಡಿತ್ತು.. ಅದರಲ್ಲಿ ರಾಮಾಚಾರಿ ಎಂಬ ಹೆಸರು ಅಂತಾ ಕೇಳಿದಾಗ ಎಲ್ಲ ಯುವಕರು ಆ್ಯಂಗ್ರಿ ಯಂಗ್ ಮ್ಯಾನ್ ಆಗುತ್ತಿದ್ದರು. ಈ ಹೆಸರು ಕೇಳಿದ ತಕ್ಷಣವೇ ಇಡಿ ಯುವಕರೇ ತಮ್ಮ ಎದೆಯ ಮೇಲೆ ಸಾಹಸಸಿಂಹ ವಿಷ್ಣು ವರ್ಧನ ಅಚ್ಚೆ ಹಾಕಿಸಿದ್ದುಂಟು. ಈಗ ಅದೇ ರೀತಿ ಅದೇ ಶೀರ್ಷಿಕೆಯ ಅಡಿ 2014 ರಲ್ಲಿ ಬಂದ ಮಿಸ್ಟರ್ & ಮಿಸೆಸ್ ರಾಮಾಚಾರಿ ಕೂಡಾ ದೇಶದಲ್ಲಿ ಧೂಳಬ್ಬಿಸಿ ರಾಕಿಂಗ್ ಸ್ಟಾರ್ ಯಶ್ ಬಹುವಾದ ಯಶಸ್ಸನ್ನು ತಂದುಕೊ್ಟ್ಟಿತ್ತು. ಈಗ ಅದೆ ಹೆಸರಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಕುಂದಾನಗರಿಯ ಕುವರ ಅಭಿಲಾಷ ಅವರು ನಾಯಕ ನಟರಾಗಿ ನಿರ್ಮಾಪಕರಾಗಿ ತುಮುಕೂರಿನ ಖ್ಯಾತ ಉದ್ಯಮಿ ಹರೀಶ ಅವರು ಚಿತ್ರ ನಿರ್ಮಾಪಕರಾಗಿ ಸಾಹಸಕ್ಕೆ ಕೈ ಹಾಕಿರುವ ಈ ಚಿತ್ರದಲ್ಲಿ ಉದ್ಯೋನ್ಮುಖ ಪ್ರತಿಭೆಗಳು ಮಾಡುತ್ತಿರುವ ಮಾರ್ಗೆರೇಟ್ ಲವರ್ ಆಫ್ ರಾಮಾಚಾರಿ ಇದೀಗ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.







