ಬೆಳಗಾವಿ:
ಪ್ರತಿಸಿದ ಜೋಡಿಗಳಿಬ್ಬರು ಮನೆಯವರು ವಿರೋಧ ಮಾಡಿದರು ಎಂಬ ಕಾರಣಕ್ಕೆ ನಿರ್ಜನ ಪ್ರದೇಶಕ್ಕೆ ತೆರಳಿ ಆಟೋದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕನಂದಿ ಗ್ರಾಮದ ಬಳಿ ನಡೆದಿದೆ. ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್ (28)ಹಾಗೂ ರಂಜಿತಾ ಚೋಬರಿ(26) ಆತ್ಮಹತ್ಯೆಗೆ ಶರಣಾದ ನರದೃಷ್ಟ ಪ್ರೇಮಿಗಳು ಎಂದು ಗುರುತಿಸಲಾಗಿದೆ..ಕಳೆದ ಕೆಲ ವರ್ಷಗಳಿಂದ ರಾಘವೇಂದ್ರ ಹಾಗೂ ರಂಜಿತಾ ನಡುವೆ ಸ್ನೇಹ ಅರಳಿತ್ತು ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು ಎನ್ನಲಾಗಿದೆ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ರಂಜಿತಾಗೆ ಅವರ ಮನೆಯವರು ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದರು ಎನ್ನಲಾಗಿದೆ. ಇದರಿಂದ ನೊಂದ ಪ್ರೇಮಿಗಳಿಬ್ಬರು ಇಂದು ಚಿಕನಂದಿ ಗ್ರಾಮದ ಹೊರವಲಯದಲ್ಲಿ ಹೋಗಿದ್ದರು. ರಾಘವೇಂದ್ರ ತಾನು ಓಡಿಸುತ್ತಿದ್ದ ಆಟೋದಲ್ಲಿಯೇ ರಂಜಿತಾಳನ್ನು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಮನನೊಂದು ಆಟೋದಲ್ಲಿಯೇ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಸ್ಥಳೀಯರು ಆಟೋ ನಿರ್ಜನ ಪ್ರದೇಶದಲ್ಲಿ ನಿಂತಿದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಧ್ಯ ಗೋಕಾಕ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













