ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಸಿಟಿ ಸ್ಮಾರ್ಟ್ ….? 

ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟ ಮತ್ತು ಅನುಷ್ಠಾನಕ್ಕಾಗಿ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಗುರಿಯಾಗುತ್ತಿವೆ. ಬೆಳಗಾವಿ ಸ್ಮಾರ್ಟ್ ಸಿಟಿ ಎಂದರೆ ಇಲ್ಲಿ ಯಾವುದು ಸ್ಮಾರ್ಟ್ ಉಳಿದಿಲ್ಲವೆಂಬುದು ವಿಪರ್ಯಾಸ್ಯವೇ ಸರಿ. ಸದಾಶಿವನಗರದ ೨ನೇ ಅಡ್ಡ ರಸ್ತೆಯಲ್ಲಿ ಕಸ ಇದೆಯೋ ಕಸದಲ್ಲಿ ರಸ್ತೆ ಇದೆಯೋ ಇದನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಉತ್ತರಿಸಬೇಕೆಂಬುದು ಜನ ಸಾಮಾನ್ಯರ ಪ್ರಶ್ನೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್(NIUA) ಮತ್ತು ವಿಶ್ವಸಂಸ್ಥೆ ಏರ್ಪಡಿಸಿದ ಸರ್ವತೋಮುಖ ನಗರ ಸ್ಪರ್ಧೆಯ ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್‌ನಲ್ಲಿ ಬೆಳಗಾವಿ ಪ್ರಥಮ ಸ್ನಾನವನ್ನು ಗಳಿಸಿದೆ. ರಾಷ್ಟ್ರಮಟ್ಟದಲ್ಲಿ 100 ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿ ಮೊದಲ ಬಹುಮಾನ ಪಡೆದಿದೆ. ಕರ್ನಾಟಕದ ಬೇರೆ ಯಾವುದೇ ನಗರಕ್ಕೆ ಪ್ರಶಸ್ತಿ ಸಿಕ್ಕಿಲ್ಲ. ಮಳೆಗಾಲ ಸಮೀಪವಿದ್ದರೂ ಸಹಿತ ಹಡಿಗೆಟ್ಟ ರಸ್ತೆಗಳು ಚರಂಡಿ  ಬ್ಲಾಕ್  ಆಗಿ ನೀರು ರಸ್ತೆಯಲ್ಲಿ ಬಂದರು  ಸಹಿತ ಬೆಳಗಾವಿ ನಗರ ಸ್ಮಾರ್ಟ ಹೇಗೆ ಎನ್ನುವ ಪ್ರಶ್ನೆ ಬೆಳಗಾವಿ ಜನರಿಗೆ ದಟ್ಟವಾಗಿ ಕಾಡುತ್ತಿದೆ
TV24 News Desk
the authorTV24 News Desk

Leave a Reply