ಕ್ರೈಂಬೆಳಗಾವಿ

ನಾಪತ್ತೆಯಾಗಿದ್ದ ಮಗನ ಹುಡುಕಲು ಹೊರಟ ಪೋಷಕರಿಗೆ ಅಪಘಾತ!

ಬೆಳಗಾವಿ:

ನಾಪತ್ತೆಯಾದ ಮಗನನ್ನು ಹುಡುಕಲು ಹೊರಟಿದ್ದ ಷೋಷಕರಿಗೆ ಭೀಕರ‌ ಅಪಘಾತವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ್ ಬಳಿ ನಡೆದಿದೆ. ಬಾಗಲಕೋಟೆ ಜಲ್ಲೆಯ ಮುಧೋಳ ಪಟ್ಟಣದಿಂದ ನಾಪತ್ತೆಯಾಗಿದ್ದ ಕೃಷ್ಣಾ ಶಿರಗಾಂವಿ (13) ಎಂಬ ಬಾಲಕನನ್ನು ಹುಡುಕಲು ಆತನ ತಂದೆ ತಾಯಿ ಬಂದಿದ್ದರು ಎನ್ನಲಾಗಿದೆ. ಕಾರಿನಲ್ಲಿ ಬಾಲಕನ ತಂದೆ ರಂಗನಾಥ ಕಲ್ಲಪ್ಪ ಶಿರಗಾಂವಿ, ಹಾಗೂ ಆತನ ಅಳಿಯ ಸುರಜ್ ಮಾದರ್ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದ ಮಾಹಿತಿ ಇದ್ದು ಬಾಲಕನ ತಂದೆ ರಂಗನಾಥ್ ಗೆ ಮಾತ್ರ ಗಂಭೀರ‌ ಗಾಯ ಗಾಯಗಳಾಗಿದ್ದು ಸೂರಜ್ ಹಾಗೂ ಬಾಲಕನ ತಾಯಿಗೆ ಸಣ್ಣ ಪುಟ್ಟ ಗಾಯಗಾಳಾಗಿವೆ ಎಂದು ಮಾಹಿತಿ ದೊರೆತಿದೆ. ಮುಧೋಳ‌ಪಟ್ಟಣದಿಂದ ನಾಪತ್ತರಯಾಗಿದ್ದ ಮಗನ‌ ಹುಟುಕಾಟಕ್ಕೆಂದು ಧಾರವಾಡಕ್ಕೆ ತೆರಳುವಾಗ ಇನಾಮಹೊಂಗಲ್ ಬಳಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಗಾಯಾಳು ರಂಗನಾಥರನ್ನು ಧಾರವಾಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply