Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಧಾರವಾಡ

 ಛೆಬ್ಬಿಗೆ ಟಿಕೆಟ್ ಪೈನಲ್..? ಎದುರಾಳಿ ಆಗ್ತಾರಾ ಸಂತೋಷ ಲಾಡ್.. !

ಧಾರವಾಡ:-ಕಲಘಟಗಿ ಕ್ಷೇತ್ರದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹಾಗೂ ಮಾಜಿ ಶಾಸಕ ಸಂತೋಷ ಲಾಡ  ನಡುವೆ ಟಿಕೆಟ್ ಗಾಗಿ ಭಾರೀ ಜಿದ್ದಾಜಿದ್ದಿ ನಡೆದಿದೆ. ಇಬ್ಬರು ಕಣದಲ್ಲಿ ಒಂದೊಂದು ಕೈ ನೋಡಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಇಬ್ಬರು ಪರಸ್ಪರ ಆರೋಪ- ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಿರತರಾಗಿದ್ದರು.
ಕಲಘಟಗಿ ಕ್ಷೇತ್ರದ ಆಕಾಂಕ್ಷಿಗಳಿಂದ ಟಿಕೇಟ್ ಗಾಗಿ ಫೈಟ್ ನಡೆದಿದ್ದು, ಇದರ ನಡುವೆ ಕಾಂಗ್ರೆಸ್ ಮುಖಂಡ ಬಂಗಾರೇಶ ಹಿರೇಮಠ ಕೂಡ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು ಮೂವರು ಪ್ರಚಾರ ಶುರು ಮಾಡಿದರು ಆದರೆ ಹೆಚ್ಚಿನ ಪೈಪೋಟಿ ಲಾಡ್ ಹಾಗೂ ಛಬ್ಬಿ ನಡುವೆ ತೀವ್ರವಾಗಿತ್ತು ಇದೀಗ ನಾಗರಾಜ ಛೆಬ್ಬಿ ಟಿಕೆಟ್ ಖಚಿತ ಎಂದು ಅವರ ಬೆಂಬಲಿಗರಿಗೆ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ  ಮುಂದಿನ ಶಾಸಕ ಎಂದು ಘೋಷಿಸಿದ್ದಾರೆ. ಇದು ಲಾಡ್ ಬೆಂಬಲಿಗರಲ್ಲಿ ಕಸಿವಿಸಿಯನ್ನುಂಟು ಮಾಡಿದ್ದು ಈಗ ಸಂತೋಷ ಲಾಡ್ ಸಹ ಟಿಕೆಟ್ ನನಗೇ ಫೈನಲ್ ಆಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೂ ಮೊದಲು ಮೊದಲ ಹಂತದ ಟಿಕೆಟ್ ಘೋಷಣೆ ಆಗಲಿದೆ ಎಂದು ನಿರೀಕ್ಷೆ ಇತ್ತು, ಆಕಾಂಕ್ಷಿಗಳ ಸಂಖ್ಯೆ ಹಾಗೂ ಟಿಕೆಟ್ ಲಾಬಿ ಹೆಚ್ಚಾಗಿರುವುದರಿಂದ ಟಿಕೆಟ್ ಘೋಷಣೆ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ರೇ ಇಬ್ಬರಲ್ಲಿ ಒಬ್ಬರು ಬಿಜೆಪಿ ಬಾಗಿಲು ತಟ್ಟುವ ಮಾತು ಕ್ಷೇತ್ರದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.
TV24 News Desk
the authorTV24 News Desk

Leave a Reply

error: Content is protected !!