ರಾಜ್ಯ

ನಾಳೆಯಿಂದಲೇ ನಂದಿನಿ ಹಾಲಿನ ಬೆಲೆ ಹೆಚ್ಚಳ

ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿದೆ. ಪ್ರತಿ ಲೀಟರ್​ ಹಾಲಿನ ಬೆಲೆ ೨  ರೂ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಕೆಎಂಎಫ್ ನಂದಿನಿ ಹಾಲು ಲೀಟರ್ ಗೆ ೨  ರೂಪಾಯಿ ಹೆಚ್ಚಿಸಿದ್ದು, ಮೊಸರು ಒಂದು ಲೀಟರ್ ಗೆ ೪೫ ರಿಂದ ೪೭  ರೂಪಾಯಿಗೆ ಏರಿಕೆಯಾಗಿದೆ. ನಂದಿನಿ ಹಾಗೂ ಮೊಸರಿನ ಪರಿಸ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಕೆಎಂಎಫ್​ ನಿರ್ದೇಶಕರ ಸಭೆಯಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದು,ನಂದಿನಿ ಹಾಲಿನ ದರ ಏರಿಕೆ ನಾಳೆಯಿಂದಲೇ ಜಾರಿಗೆ ಬರಲಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಹೆಚ್ಚಳ ಮಾಡಿರುವ ದರದಲ್ಲಿ ಪೂರ್ತಿ ಹಣ ಹಾಲು ಉತ್ಪಾದಕರಿಗೆ ನೀಡಲು ಕೆಎಂಎಫ್​ ನಿರ್ಧರಿಸಿದೆ. ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ ೩೧ ರಿಂದ ೩೨  ರೂಪಾಯಿ ಸಿಗಲಿದೆ. ಎಂದು ತಿಳಿಸಿದರು.
ಹಾಲಿನ ದರ ಸಂಬಂಧ ಕಳೆದ ಹದಿನೈದು ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್​ ಮುಸುಕಿನ ಗುದ್ದಾಟ  ನಡೆದಿದೆ. ಮೊನ್ನೇ ಅಷ್ಟೇ ಕೆಎಂಎಫ್​ ಹಾಲಿನ ದರ ಹೆಚ್ಚಿಸಿತ್ತು. ಆದ್ರೆ, ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ಆದ್ರೆ, ಇದೀಗ ಮತ್ತೆ ಕೆಎಂಎಫ್​ ಸಭೆ ಸೇರಿ ಅಂತಿಮವಾಗಿ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಿಸಿದೆ.
TV24 News Desk
the authorTV24 News Desk

Leave a Reply

error: Content is protected !!