Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಸತೀಶ್ ಜಾರಕಿಹೊಳಿ‌ಯವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ: ಕಡೋಲಿ‌‌ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೇದನೂರ, ಮನ್ನಿಕೇರಿ ಹಾಗೂ ಹಂದಿಗನೂರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಾಸಕ ಸತೀಶ್ ಜಾರಕಿಹೊಳಿ‌ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಣ್ಣಿಕೇರಿ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ  ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಮತ್ತು 25 ಲಕ್ಷ ರೂ. ಸಿಸಿ ರಸ್ತೆ, ಕೇದನೂರ ಗ್ರಾಮದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಕೇದನೂರ ದಿಂದ ಹೈವೆ ರಸ್ತೆವರೆಗೆ ಡಾಂಬರೀಕರಣ, ಬ್ರಹ್ಮಲಿಂಗ ಗಲ್ಲಿ 20 ಲಕ್ಷ ರೂ. ಸಿ.ಸಿ. ರಸ್ತೆ, ಪಾಟೀಲ ಗಲ್ಲಿ  15 ಲಕ್ಷ ರೂ. ಸಿ.ಸಿ. ರಸ್ತೆ, ಕೇದನೂರ ರಿಂದ ಮಣ್ಣಿಕೇರಿವರೆಗೆ 50 ಲಕ್ಷ ರೂ. ವೆಚ್ಚದ ಡಾಂಬರೀಕರಣ,  ಜೆ ಜೆ ಎಮ್ ಯೋಜನೆಯಡಿ ಕೇದನೂರ ತೀರ್ಥ ಬಾವಿಯಿಂದ ಟ್ಯಾಂಕ್‌ ವರೆಗೆ ಪೈಪ್ ಲೈನ್‌  40 ಲಕ್ಷ ರೂ. ವೆಚ್ಚದ ಕಾಮಗಾರಿ, ಕೇದನೂರ ಗ್ರಾಮದ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳಿಗೆ ತಲಾ 5 ಲಕ್ಷ ವೆಚ್ಚದ ಟೈಲ್ಸ್ ಅಳವಡಿಕೆ  ಮತ್ತು 3 ಲಕ್ಷ ರೂ. ಬೋರವೆಲ್ ಹಾಗೂ ಹಂದಿಗನೂರ ಗ್ರಾಮದಿಂದ ಇದ್ದಲಹೊಂಡ ಗ್ರಾಮದವರೆಗೆ ಡಾಂಬರೀಕರಣ  ಕಾಮಗಾರಿಗಳಿಗೆ  ಚುನಾಯಿತ ‌ಪ್ರತಿನಿಧಿಗಳು, ಗ್ರಾಮದ ಮುಖಂಡರು ‌ಮತ್ತು ಹಿರಿಯರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
TV24 News Desk
the authorTV24 News Desk

Leave a Reply

error: Content is protected !!