ಬೆಳಗಾವಿ: ಕಾಲೇಜ್ ಪ್ರದೇಶದಲ್ಲಿ ಗಾಂಜಾ, ಅಫೀಮ್, ಮಾದಕ ವಸ್ತುಗಳ ಮಾರಾಟ ವಾಗುತ್ತಿದ್ದು ಈ ಕಾಲೇಜ್ ಪ್ರದೇಶದಲ್ಲಿ ಇಂತಹ ಮಾದಕ ವಸ್ತುಗಳ ಮಾರಾಟ ಇಂದಿನ ಯುವಕರ ಭವಿಷ್ಯವನ್ನು ನಾಶ ಮಾಡಲಿದೆ ಮಾದಕ ವಸ್ತು ಗಳನ್ನು ಮಾರಾಟ ಮಾಡುವ ಗ್ಯಾಂಗ್ಗಳನ್ನು ಕೂಡಲೇ ಬಂಧಿಸಬೇಕೆಂದು ರಮಕಾಂತ್ ಕುಂಡಾಸ್ಕರ್ ಆಗ್ರಹಿಸಿದರು
ಮಂಗಳವಾರ ಶ್ರೀ ರಾಮ್ ಸೇನಾ ಹಿಂದುಸ್ತಾನ್ ಸಂಸ್ಥಾಪಕ ರಮಕಾಂತ್ ಕುಂಡಾಸ್ಕರ್ ಬೆಳಗಾವಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಟಿಳಕವಾಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೂರು ಕೆ ಜಿ ಗಾಂಜಾ ಜಪ್ತ ಮಾಡಲಾಗಿದೆ ಆದರೆ ಇಲಾಖೆಯ ಕೆಲ ಅಧಿಕಾರಿಗಳು ಆರೋಪಿಗಳ ಜೊತೆ ಸೆಟಲ್ಮೆಂಟ್ ಮಾಡಿಕೊಂಡು ಆರೋಪಿಗಳನ್ನು ಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು .