Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಅಂತರಾಷ್ಟ್ರೀಯ

ಬ್ರಿಟನ್ ಪಿ ಎಂ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಜಿ-೨೦ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಜಿ-೨೦ ಒಕ್ಕೂಟದ ಏಳು ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ.ಇಂಡೋನೇಷ್ಯಾ, ಸ್ಪೇನ್,ಸಿಂಗಾಪುರ್, ಜರ್ಮನಿ, ಇಟಲಿ, ಆಸ್ಟ್ರೇಲಿಯಾ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಜಿ-೨೦ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಉಕ್ರೇನ್‌ನಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ಭಾರತದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದರು “ನಾವು ಕದನ ವಿರಾಮದ ಹಾದಿಗೆ ಮರಳಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಕಳೆದ ಶತಮಾನದಲ್ಲಿ, ಎರಡನೆಯ ಮಹಾಯುದ್ಧ ಜಗತ್ತಿನಲ್ಲಿ ವಿನಾಶ ಉಂಟುಮಾಡಿತು. ಆ ಬಳಿಕ ಶಾಂತಿ ಮಾರ್ಗ ಹಿಡಿಯಲು ಅಂದಿನ ಮುಖಂಡರು ತೀವ್ರ ಪ್ರಯತ್ನ ನಡೆಸಿದರು. ಈಗ ನಮ್ಮ ಸರದಿ. ಕೋವಿಡ್ ನಂತರದ ಅವಧಿಗೆ ಹೊಸ ವಿಶ್ವ ಕ್ರಮವನ್ನು ರಚಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂದು ಹೇಳಿದ್ದಾರೆ.
ಜಿ-೨೦ ಶೃಂಗಸಭೆಯ ಎರಡನೇ ದಿನವಾದ ಇಂದು ೧೭ನೇ ಆವೃತ್ತಿಯಲ್ಲಿ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ. ಜಾಗತಿಕ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮ್ಯಾಂಗ್ರೋವ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇಂಡೋನೇಷ್ಯಾ ಉ-೨೦ ಅಧ್ಯಕ್ಷತೆಯನ್ನು ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಿದ್ದಾರೆ.
ಭಾರತ ಮ್ಯಾಂಗ್ರೋವ್‌ಗಳ ರಕ್ಷಣೆ ಮತ್ತು ಪುನಃಸ್ಥಾಪನೆಗೆ ಒತ್ತು ನೀಡುತ್ತಿದೆ, ಜೀವವೈವಿಧ್ಯತೆಯ ಶ್ರೀಮಂತ ತಾಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ “ಪ್ರಧಾನಿ ನರೇಂದ್ರ ಮೋದಿ ಹವಾಮಾನ ಬದಲಾವಣೆ ಎದುರಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಹೆಚ್ಚಿಸಲು ಒಗ್ಗೂಡುವ ಬಲವಾದ ಸಂದೇಶ ನೀಡಿದ್ದಾರೆ.
 
TV24 News Desk
the authorTV24 News Desk

Leave a Reply

error: Content is protected !!