

ಬೆಳಗಾವಿ:
ನಿಮಗೆಲ್ಲ ಶಂಕರನಾಗ್ ನಟನೆಯ ಹೊಸಬೆಳಕು ಚಿತ್ರ ಗೊತ್ತಿರಬೇಕು ಅದರಲ್ಲಿನ ಒಂದು ಹಾಡು ಇಂದಿಗೂ ಸಹ ಎಲ್ಲರ ಹಾಟ್ ಫೇವರಿಟ್ ಚಿತ್ರದಲ್ಲಿ ಕಥಾನಾಯಕ ಒಂದು ಅನಾಥ ಮಗು ಈಗ್ಯಾಕೇ ಈ ಕಥೆ ನೆನಪಿಸುತ್ತಿದ್ದಿವೀ ಅಂದ್ರೆ ಆ ಚಿತ್ರದಲ್ಲಿ ಅನಾಥ ಮಗುವಾದೇ ನಾನು ಅಮ್ಮನು ಅಪ್ಪನಝ ಇಲ್ಲ ಎಂಬ ಹಾಡಿದೆ ಆ ಹಾಡಿಗೆ ಹೋಲಿಕೆಯಾಗುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು ಆಗತಾನೇ ಹುಟ್ಟಿದ ಗಂಡು ಹಸುಳೆಯನ್ನು ಪಾಪಿ ತಾಯಿ ಕಸದ ನಡುವೆ ಇಟ್ಟು ಪರಾರಿಯಾಗಿದ್ದಾಳೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಮಗುವಿನ ಅಳುವಿನ ಶಬ್ಧ ಕೇಳಿ ಕುರಿಗಾಹಿಗಳು ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಕುರಿಗಾಹಿಗಳೇ ಮಗು ಸಿಕ್ಕಿರುವ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ರಕ್ಷಿಸಿ ಸವದತ್ತಿ ಸಾರ್ವಜನಿಕ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.ಇನ್ನು ಘಟನಾ ಸ್ಥಳಕ್ಕೆ ರಾಮದುರ್ಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳೀಯ ಸುಳಿವುಗಳನ್ನಾಧರಿಸಿ ಮಗುವನ್ನು ಬಿಟ್ಟು ಹೋದ ಪಾಪಿಗಳ ಹುಟುಕಾದಲ್ಲಿ ತೊಡಗಿದ್ದಾರೆ.








