ಅಂತರಾಷ್ಟ್ರೀಯಜಿಲ್ಲೆಬೆಳಗಾವಿ

ಕನ್ನಡದ ಕಟ್ಟಾಳು ಸಿಡಿದೆದ್ದರೆ ಕಲಿಗೂನು ಕೆಡಬಹುದು ಕಡುನಿದ್ದಿರೆ-ಜೋಕೆ

ಬೆಳಗಾವಿ:

ನೆರೆಯ ರಾಜ್ಯ ಗೋವಾದಲ್ಲಿ ಕನ್ನಡಿಗರು ಎಷ್ಟು ಸೇಫ್ ಎಂಬ ಭಾವನೆ ಸಧ್ಯ ಕನ್ನಡಿಗರಲ್ಲಿ ಮೂಡತೊಡಗಿದೆ. ನಾವೆಲ್ಲ ಸರ್ವಜನಾಂಗದ ಶಾಂತಿಯ ತೋಟದ ಹೂವುಗಳು ಪಕ್ಕದ ರಾಜ್ಯ ಗೋವಾದಲ್ಲಿ ಉಸಿರಾಡೋದೆ ಕಷ್ಟವಾಗಿರುವ ಪರಿಸ್ಥಿತಿ ‌ನಿರ್ಮಾಣವಾಗಿದೆ. ನೆರೆಯ ಗೋವಾ ರಾಜ್ಯದಲ್ಲಿ ಕನ್ನಡಿಗ ಕಾರ್ಮಿಕರ ಮೇಲೆ ಅಲ್ಲಿನ ಕೆಲ ಗೂಂಡಾಗಳು ದಬ್ಬಾಳಿಕೆ ನಡೆಸಿ ಚಲಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ ಹಲ್ಲೆ ಮಾಡಿದ ದೃಶ್ಯ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಬುಧುವಾರ ಸಂಜೆ ಕರ್ನಾಟಕದ ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ನಿವಾಸಿ ಅನೀಲ್‌ ರಾಠೋಡ್ ಎಂಬ ಟ್ರಕ್ ಚಾಲಕನ ಮೇಲೆ ಅಲ್ಲಿನ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಗೋವಾ ರಾಜ್ಯದ ಪೆಡ್ನೆ ಸಮೀಪದ ರಾಜ್ಯ ಹೆದ್ದಾರಿಯ ಮೇಲೆ ವಾಹನ ತಡೆದು ಹಲ್ಲೆ ಮಾಡಲಾಗಿದೆ.ಓಮಿನಿ ಕಾರು ಹಾಗೂ ಜೀಪ್ ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಲಾರಿ ತಡೆದು ಹಲ್ಲೆ ಮಾಡಿದ್ದಾರೆ. ಇದನ್ನು ಅನೀಲ್‌ ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಮಹಾರಾಷ್ಟ್ರದಿಂದ ಗೋವಾ ರಾಜ್ಯಕ್ಕೆ ಕಲ್ಲು ತೆಗೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಸಧ್ಯ ಹಲ್ಲೆಗೊಳಗಾದ ಅನೀಲ್ ಪೆಡ್ನೆ ಠಾಣೆಗೆ ತೆರಳಿ ದೂರು ನೀಡಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಆರೋಪ ಕೇಳಿ ಬಂದಿದೆ. ಇನ್ನು ಈ ಕುರಿತು ಮಾತನಾಡಿರುವ ಗೋವಾ ರಾಜ್ಯದ ಮಾಪ್ಸಾ ಲಾರಿ ಮಾಲೀಕರ ಸಂಘದ ಮುಖಂಡ ಸಮೀರ್ ಶೆಟ್ಟರ್ ಸುರೇಶ್ ಪೆಟ್ಟಿಗೇರಿ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಕನ್ನಡಿಗರ ಮೇಲೆ ಪದೇ ಪದೇ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಯಲು ಸಿಎಂ ಸಿದ್ದರಾಮಯ್ಯ ಗೋವಾ ಸಿಎಂ ಜೊತೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

TV24 News Desk
the authorTV24 News Desk

Leave a Reply