

ಬೆಳಗಾವಿ:
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲೆಯ ಡ್ಯಾಂ ನಲ್ಲಿ 2 ತಿಂಗಳಿಗೆ ಆಗುವಷ್ಟು ನೀರು ಇದೆ.ಜುಲೈ ಅಂತ್ಯದವರೆಗೆ ಸಮಸ್ಯೆ ಇಲ್ಲ ಅವಶ್ಯಕತೆ ಬಿದ್ರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತವೆ.ಬೆಳಗಾವಿ ನಗರದಲ್ಲಿ ಸಾಕಷ್ಟು ಬೋರವೆಲ್ ಗಳು ಇವೆ
ಹಿಡಕಲ್ ಡ್ಯಾಂ ನಲ್ಲಿ ಇನ್ನೂ ನೀರು ಇದೆ ಆತಂಕ ಬೇಡ ಎಂದರು.24/7 ನೀರು ಯೋಜನೆ ಪೂರ್ಣಗೊಂಡಿಲ್ಲ ಕೇವಲ ಒಂದು ಗಂಟೆ ಮಾತ್ರ ಬಿಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ನೀರು ಕೊರೆತೆ ಇಲ್ಲ, ನಿರ್ವಹಣೆಯಲ್ಲಿ ಸಮಸ್ಯೆ ಇದೆ
ಪಾಲಿಕೆಯಿಂದ ಟ್ಯಾಂಕರ್ ಮಾಡಲು ಬಗ್ಗೆ ಚಿಂತನೆ ಮಾಡ್ತಿವಿ ಎಂದರು. ಇನ್ನು ಟ್ಯಾಂಕರ್ ನೀರಿಗೆ ಡಬಲ್ ಹಣ ವಸೂಲಿ ಮಾಡ್ತಿರೋ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ಕೊಡ್ತಿವಿ ಎಂದರು.ಡ್ಯಾಂಗೆ ನೀರು ಒಳಹರಿವು ಆರಂಭವಾಗಿಲ್ಲ
ಹೀಗಾಗಿ ಡ್ಯಾಂ ನಲ್ಲಿ ನೀರು ಕಮ್ಮಿ ಇದೆ ಎಂದು ಅನಿಸುತ್ತದೆ.ಡ್ಯಾಂ ನಲ್ಲಿ ಕೈಗಾರಿಕಾ ನೀರು ಮೀಸಲು ಇದೆ ಆ ನೀರನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಯಾವುದೇ ಹೆಚ್ಚುವರಿ ನೀರು ತೆಗೆದುಕೊಂಡು ಹೋಗುತ್ತಿಲ್ಲ.ಪಾಲಿಕೆಯವರು ಸಮಸ್ಯೆ ಬಗ್ಗೆ ಬಂದು ಹೇಳಲ್ಲ.ಸರಿಯಾದ ಮಾಹಿತಿ ಕೊಡೊದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳ ವಿರುದ್ಧ ಸತೀಶ್ ಜಾರಕಿಹೊಳಿ ಗರಂ ಆದರು.ಇನ್ನು ಮಹಾರಾಷ್ಟ್ರದಿಂದ ಕೃಷ್ಣ ನದಿಗೆ ನೀರು ಬಿಡೊದು ಕಷ್ಟ ಅಲ್ಲಿಯೇ ಪರಿಸ್ಥಿತಿ ಸರಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಉನ್ನತ ಮಟ್ಟದ ಅಧಿಕಾರಗಳ ಭೇಟಿ ವೇಳೆ ಮಹಾರಾಷ್ಟ್ರದವರು ಹೇಳಿದ್ದಾರೆ ಎಂದು ಸಚಿವ ಸತೀಶ್ ಹೇಳಿದರು.










