Uncategorized

ಏನಿದು ಸೇಫ್ ಟೂರಿಸಂ ಸಭೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಜೊತೆ ಸಭೆ ಮಾಡ್ತಿನಿ ಅಂದಿದ್ಯಾಕೆ!

ಬೆಳಗಾವಿ:

ಬೆಳಗಾವಿ ಜಿಲ್ಲೆಯ ಮಳೆಯ ಪ್ರಮಾಣದ ಕುರಿತು ಮಾಧ್ಯಮಗಳಿಗೆ ಡಿಸಿ ಮಾಹಿತಿ ನೀಡಿದ್ದು ಡಿಸಿ ಮೊಹಮ್ಮದ್ ರೋಷನ್ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ,ಅಥಣಿ, ಚಿಕ್ಕೋಡಿ, ಹುಕ್ಕೇರಿ, ಸವದತ್ತಿ,ಕಿತ್ತೂರು, ನಿಪ್ಪಾಣಿ, ಕಾಗವಾಡದಲ್ಲಿ ಒಂದೇ ದಿನ 200 ರಿಂದ 400 ಎಂಎಂ ಮಳೆಯಾಗಿದೆ.ಮಹಾರಾಷ್ಟ್ರದಲ್ಲೂ ಮಳೆ ಇದೆ ಇಲ್ಲೂ ಮಳೆಯಿದೆ.ರಾಜಾಪುರ ಬ್ಯಾರೇಜ್ ನಿಂದ 59 ಸಾವಿರ ಕ್ಯೂಸೇಕ್ ನೀರು ಬರುತ್ತಿದೆ.ದೂಧಗಂಗಾ ವೇದಗಂಗಾ ಸೇರಿ 17 ಸಾವಿರ ಕ್ಯೂಸೇಕ್ ನೀರು ಸೇರುತ್ತಿವೆ.ಸದ್ಯ ಹಿಪ್ಪರಗಿ ಬ್ಯಾರೇಜ್ ನಲ್ಲಿ 1.54 ಟಿಎಂಸಿ ನೀರು ಸಂಗ್ರಹನೆ ಮಾಡಿದ್ದೆವೆ.
ಹಿಡಕಲ್ ಜಲಾಶಯಕ್ಕೆ ಈಗ 14 ಸಾವಿರ ಕ್ಯೂಸೇಕ್ ನೀರು ಒಳಹರಿವಿದೆ.ಮಲಪ್ರಭಾ ನದಿಗೆ 2069 ಸಾವಿರ ಕ್ಯೂಸೇಕ್ ನೀರು ಒಳಹರಿವಿದೆ ಎಂದರು.ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಫಾಲ್ಸ್ ಗಳಲ್ಲಿ ನೀರು ಹೆಚ್ಚು ಬರುತ್ತಿದ್ದು ಜನ ಫಾಲ್ಸ್ ನೋಡಲು ಹೋಗಿತ್ತಿರುವುದಕ್ಕೆ ನಿರ್ಬಂಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿ ಜಿಲ್ಲೆಯಲ್ಲಿ ಈ ವರ್ಷ ನಾವು ಸೇಫ್ ಟೂರಿಸಂಗೆ ಪ್ರಯತ್ನ ಮಾಡುತ್ತಿದ್ದೆವೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ಮಾಡ್ತಿವಿ ಸೇಫ್ ಟೂರಿಸಂ ಮಾಡಲು ಎನು ಮಾಡಬೇಕು ಎನ್ನುವುದರ ಕುರಿತು ವಿಚಾರ ಮಾಡ್ತಿವಿ 10 ರಿಂದ 15 ದಿನಗಳ ಒಳಗೆ ಒಂದು ಗೈಡ್ ಲೈನ್ ನೀಡುತ್ತೆವೆ.ಅದರಂತೆ ಕಂಟ್ರೋಲ್ ಟೂರಿಸಂ ಮಾಡಲು ಅನುಕೂಲ ಮಾಡುತ್ತವೆ ನಾವು ಹಾಕುವ ಕಂಡಿಷನ್ಸ್ ಗೆ ಜನ ರೆಸ್ಪಾನ್ಸ್ ಮಾಡಬೇಕು ನಮ್ಮ ಕಂಡಿಷನ್ ಒಪ್ಪಲಿಲ್ಲ ಅಂದ್ರೆ ನಾವು ನಿರ್ಬಂಧ ಹಾಕುತ್ತೆವೆ ಎಂದು ಡಿಸಿ ಹೇಳಿದರು.ಇನ್ನು ಜಿಲ್ಲೆಯಲ್ಲಿ ಮನೆಗಳು ಕುಸಿಯುತ್ತಿರು ವಿಚಾರಕ್ಕೆ ಈಗಾಗಲೇ ಗ್ರಾಂ ಪಂ ನಿಂದ ಮನೆಗಳ ಮ್ಯಾಪಿಂಗ್ ಮಾಡಲು ಹೇಳಿದ್ದೇವೆ ಮಳೆ ಜಾಸ್ತಿ ಆಗುತ್ತಿದ್ದರೆ ಕುಸಿಯುವ ಹಂತದ ಮನೆಯವರು ಅವರು ಸಂಬಂಧಿಕರ ಮನೆಗೆ ಹೋಗಬೇಕು ಜೀವಕ್ಕೆ ಯಾವುದೇ ಹಾನಿಯಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು. ಇನ್ನು ನದಿ ದಡದಲ್ಲಿರುವ ಜನ ಎಚ್ಚರಿಕೆ ಯಿಂದ ಇರಬೇಕು ಮೋಟರ್ ಹಾಕುವ ಹಾಗೂ ರಿಪೇರಿ ಮಾಡಿಸುವ ಕೆಲಸಕ್ಕೆ‌ ಮುಂದಾಗಬಾರದು ಯಾರೂ ಸಹ ನದಿ ತೀರಕ್ಕೆ ಹೋಗುವ ಅವಶ್ಯಕತೆ ಇಲ್ಲ ಈಗ ನಮಗಿರುವ ಮಾಹಿತಿಯ ಪ್ರಕಾರ 7 ಸೇತುವೆಗಳು ಮುಳುಗಿವೆ ಅದನ್ನು ನಾವು ಮಾನಿಟರ್ ಮಾಡುತ್ತೆವೆ ಎಂದು ಡಿಸಿ ಹೇಳಿದರು.

TV24 News Desk
the authorTV24 News Desk

Leave a Reply