ಬೆಳಗಾವಿಬೆಳಗಾವಿ ನಗರ

ಎರಡು ಲಕ್ಷ ಹಣ ಕೊಟ್ಟರೆ ಮಾತ್ರ ಟಿಕೆಟ್ ; ಕೈ ಪಕ್ಷದ ಕಾಲೆಳೆದ ಶಾಸಕ ಬೆನಕೆ.!

ಬೆಳಗಾವಿ: ಸದ್ಯ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅಂದರೆ ಯಾರು ಎರಡು ಲಕ್ಷ ಹಣ ಕೊಡುತ್ತಾರೆ ಅವರಿಗೆ ಮಾತ್ರ ಟಿಕೆಟ್ ಕೊಡುತ್ತಾರೆ ಇವರು. ಅಂದರೆ ಕಾಂಗ್ರೆಸ್ ನಲ್ಲಿ ಬಡವರಿಗೆ ಬೆಲೆ ಇಲ್ಲ. ಹಣ ಕೊಟ್ಟವನಿಗೆ ಮಾತ್ರ ಟಿಕೆಟ್ ಕೊಡೋ ಕೆಲಸ ಇವರದ್ದು. ಇದು ಇಡೀ ದೇಶದಲ್ಲಿ ಕಾಂಗ್ರೆಸ್ ಗೆ ಇರೋ ಮಾನಸಿಕತೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಇಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಒಂದು ಫ್ಯಾಮಿಲಿಯಲ್ಲಿ ಒಬ್ಬರು ಎರಡು ಲಕ್ಷ ಹಣ ತುಂಬಿ ಟಿಕೆಟ್ ಕೇಳುತ್ತಾರೆ ಅಂದರೆ, ಕಾಂಗ್ರೆಸ್ ನಲ್ಲಿ ಫ್ಯಾಮಿಲಿ ರಾಜಕೀಯ ಎಷ್ಟರ ಮಟ್ಟಿಗೆ ಇದೆ ಅನ್ನೋದು ಗೊತ್ತಾಗುತ್ತಿದೆ ಎಂದು ಶಾಸಕ ಬೆನಕೆ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಕೇವಲ ಫ್ಯಾಮಿಲಿ ರಾಜಕಾರಣ ಎಂದು ಕುಟುಕಿದರು. ಇಲ್ಲಿನ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೊಂದಿದ ಮಂದಿಯೇ ಬಹಳ ಅಂತ ಕಾಲೆಳೆದರು.
TV24 News Desk
the authorTV24 News Desk

Leave a Reply