Uncategorized

ಪ್ರವಾಹದಲ್ಲಿ ಸಿಲುಕಿದ ಬಸ್!ವೃದ್ದೆಯನ್ನು ಹೆಗಲ ಮೇಲೆ ಹೊತ್ತು ತಂದ ಮಹಾ ಪೊಲೀಸರು!

ಮಹಾರಾಷ್ಟ್ರ:

ಪ್ರವಾಹದಲ್ಲಿ ಸಿಲುಕಿದ ಪ್ರಯಾಣಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಏಕಾಏಕಿ ಪ್ರವಾಹದ ನೀರಲ್ಲಿ ಸಿಲುಕಿ ಪರದಾಡಿದ್ದಾರೆ.ಏಕಾಏಕಿ ನೀರು ಜಾಸ್ತಿ ಆಗಿ ಪ್ರವಾಹದಲ್ಲಿ ಬಸಗಸು ಸಿಲುಕಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಸ್ಸಿನಲ್ಲಿ ಸಿಲುಕಿದ್ದ ವೃದ್ದೆಯನ್ನು ಹಾಗೂ ಮಕ್ಕಳನ್ನು ಪೊಲೀಸರು ತಮ್ಮ ‌ಜೀವ ಒತ್ತೆ ಇಟ್ಟು ರಕ್ಚಿಸಿದ ಘಟನೆ ಮಹಾರಾಷ್ಟ್ರ ರಾಜ್ಯದ ರಾಯಘಡ ಜಿಲ್ಲೆ ರಾಸಯ್ನಿ ಬಳಿ ನಡೆದಿದೆ.ಹೆಗಲ ಮೇಲೆ ವೃದ್ದ ಮಹಿಳೆಯನ್ನು ಹೊತ್ತು ನಡು ಮಟ್ಟದ ನೀರಲ್ಲಿ ಪೊಲೀಸರು ನಡೆದುಕೊಂಡು ಬಂದು ಆಕೆಯ ಜೀವ ಉಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ನಡು ಮಟ್ಟದ ನೀರಲ್ಲಿ ಮಹಿಳೆಯನ್ನು ರಕ್ಷಿಸಿದ ಪೊಲೀಸರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧಾರಾಕಾರ ಮಳೆಯಿಂದ ಮಹಾರಾಷ್ಟ್ರದಲ್ಲಿ ಅವಾಂತರಗಳು ಹೆಚ್ಚಾಗುತ್ತಿವೆ.ಮಹಾರಾಷ್ಟ್ರದಾದ್ಯಂತ ಈಗಾಗಲೇ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಮನೆಯಿಂದ ಸುಮ್ಮನೆ ಹೊರ ಬರದಂತೆ ಸೂಚನೆ ನೀಡಲಾಗಿದೆ.

TV24 News Desk
the authorTV24 News Desk

Leave a Reply