Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

 ಬ್ಯಾಂಕ್‌ ಅಧಿಕಾರಿಗಳಿಂದಲೇ ಕೋಟಿ ಕೋಟಿ ಹಣ ಲೂಟಿ:ಪ್ರಕರಣ ದಾಖಲು 

ಹುಕ್ಕೇರಿ : ಹುಕ್ಕೇರಿ ನಗರದಲ್ಲಿರುವ ಕರ್ನಾಟಕ ವಿಕಾಸ್ ಬ್ಯಾಂಕ್ ನಲ್ಲಿ 1.73 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.ಈ ಕುರಿತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ  ಗೋಕಾಕ ಕಚೇರಿ ಪ್ರಬಂಧಕ ಅವಿನಾಶ್ ಇಂದ್ರಜೀತ್ ಅಸೋದೆ ಅವರು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳೇ ಈ ಕೃತ್ಯದಲ್ಲಿ ಭಾಗಿಗಳಾಗಿದ್ದು, ‘ಸ್ಥಿರ ಠೇವಣಿ’ ಮೇಲಿನ ಸಾಲದ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ. 21 ಜನರ ನಕಲಿ ಕಾಗದ ಪತ್ರಗಳನ್ನು ಸಿದ್ದಪಡಿಸಿ ಹಣ ವರ್ಗಾಯಿಸಿಕೊಂಡು ಬ್ಯಾಂಕಿಗೆ ಆರ್ಥಿಕ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂ. 9ರಿಂದ ಆ. 29ರ ತನಕ ಒಟ್ಟು 21 ಸಲ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದು, ಉಳಿದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸೇರಿಸಿಕೊಂಡು ಹಣ ದೋಚಿದ್ದಾರೆ. ಅಲ್ಲದೇ ಈ ವಿಚಾರ ಬಹಿರಂಗವಾಗದಂತೆ ತಮ್ಮ ಪತ್ನಿ ಖಾತೆಗೆ ಜಮಾ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೂರು ದಾಖಲಾದ ಹಿನ್ನಲೆ ಮುಖ್ಯ ಆರೋಪಿ ಮಲ್ಲಿಕಾರ್ಜುನ ಶಿರಗಾಂವಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
TV24 News Desk
the authorTV24 News Desk

Leave a Reply

error: Content is protected !!