ಬೆಳಗಾವಿ : ಪ್ರತಿ ಮತದಾರರಿಗೆ 6000 ರೂ ಹಣ ನೀಡಲಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಇದುವರೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಾವಿರಾರು ರೂಪಾಯಿಯ ಗಿಫ್ಟ್ ನೀಡಿದ್ದಾರೆ, ಎಲ್ಲ ಸೇರಿ 3000 ಆಗಬಹುದು, ನಾನು ಪ್ರತಿ ಮತದಾರರಿಗೆ 6 ಸಾವಿರ ರೂ ನೀಡುತ್ತೇನೆ. ಒಂದು ವೇಳೆ ಕೊಡದಿದ್ದರೆ ನನಗೆ ಓಟು ಹಾಕಬೇಡಿ ಎಂದು ಹೇಳಿದರು.ಈ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಬಿಜೆಪಿ ರಮೇಶ್ ಜಾರಕಿಹೊಳಿ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.