Uncategorized

ಹೆರಾಯಿನ್ ಸಾಗಾಟ ಮಾಡ್ತಿದ್ದ ಇಬ್ಬರ ಬಂಧನ!4.96 ಲಕ್ಷ ಮೌಲ್ಯದ ಹೆರಾಯಿನ್ ವಶ!

ಬೆಳಗಾವಿ:

ಹೆರಾಯಿನ್ ಸಾಗಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಮುಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಬಂಧಿತ ಆರೋಪಿಗಳನ್ನು ಬೆಳಗಾವಿ ನಗರದ ಕಂಗ್ರಾಳಿ ಕೆ ಹೆಚ್ ಗ್ರಾಮದ ಗಜಾನನ ಪಾಟೀಲ್ ಹಾಗೂ ರಾಮದೇವ ಗಲ್ಲಿಯ ವಿನಾಯಕ ಖಂಡಾಳೆ ಎಂದು ಗುರುತಿಸಲಾಗಿದೆ.ಆರೋಪಿಗಳಿಬ್ಬರು ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಣ್ಣಿನ ಮಾರುಕಟ್ಟೆಯ ಕಾಂಪ್ಲೇಕ್ಸ್ ಬಳಿ ಹೆರಾಯಿನ್ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರ ತಂಡ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂಧಿ ದಾಳಿ ನಡೆಸಿ ಒಟ್ಟು 4,96,000 ರೂ ಮೌಲ್ಯದ 24.80 ಗ್ರಾಂ ಹೆರಾಯಿನ್ ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply