ಜಿಲ್ಲೆಬೆಳಗಾವಿಬೆಳಗಾವಿ ನಗರ

ಮೂವರು ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ!

ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಂದತೆ ಮೊಂಡು ವಾದ ಮಾಡಿ ಮರಾಠಿಯಲ್ಲಿ ಪತ್ರ ವ್ಯವಹಾರಕ್ಕೆ ಅವಕಾಶ ನೀಡಬೇಕು ಎಂದು ವಾದಿಸಿದ್ದ ಮೂವರು ಎಂಇಎಸ್ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಕರವೇ(ನಾರಾಯಣಗೌಡ) ಬಣ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ತೆರಳಿ ಡಿಸಿಯವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಎಂಇಎಸ್ ಸದಸ್ಯರಾದ ರವಿ ಸಾಳುಂಕೆ,ಶಿವಾಜಿ ಮಂಡೋಳಕರ್, ಹಾಗೂ ವೈಶಾಲಿ ಭಾತಕಾಂಡೆಯವರ ಸದಸ್ಯತ್ವವನ್ನು‌ ರದ್ದು ಮಾಡಲು ಮನವಿ ಮಾಡಿದರು. ಒಂದು ವೇಳೆ ಎಂಇಎಸ್ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

TV24 News Desk
the authorTV24 News Desk

Leave a Reply