ಜಿಲ್ಲೆಬೆಳಗಾವಿ

ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆಗೆ ಅಸ್ತು!

ಬೆಳಗಾವಿ:

ಬೆಳಗಾವಿಯಲ್ಲಿ ನವೀಲುತೀರ್ಥ ಜಲಾಶಯ ನಿರ್ವಹಣೆ ಸಲಹಾ ಸಮಿತಿ ಸಭೆ ನಡೆಯಿತು‌.‌
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ
ಬೆಳಗಾವಿಯ ನೀರಾವರಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್, ಶಾಸಕರಾದ ಚಿಮ್ಮನಕಟ್ಟಿ ಸೇರಿ ಹಲವರು ಭಾಗಿಯಾಗಿದ್ದರು‌
ಸಭೆಯ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ
ಬದಾಮಿ, ನರಗುಂದ, ಸವದತ್ತಿ ಭಾಗದಲ್ಲಿ ಬೆಳೆಗಳಿಗೆ ನೀರಿನ ಕೊರತೆ ಇದೆ ಬೆಳೆಗಳು ಒಣಗುವ ಭೀತಿಯಲ್ಲಿ ರೈತರು ಇದ್ದಾರೆ.
ಇಂದು ರೈತರ ಜೊತೆಗೆ ಸಭೆಯನ್ನು ಮಾಡಿದ್ದೇವೆ ನವೀಲುತೀರ್ಥ ಡ್ಯಾಂ ನಲ್ಲಿ ಇಂದು 25 tmc ನೀರು ಸಂಗ್ರಹವಿದೆ 20tmc ಕುಡಿಯುವ ನೀರು ಮೀಸಲು ಇಟ್ಟುಕೊಂಡಿದ್ದೇವೆ 4.5tmc ನೀರು ಕಾಲುವೆಗಳ ಮೂಲಕ ಬಿಡಲು ತೀರ್ಮಾನ ಮಾಡಿದ್ದೆವೆ.
ಇಂದಿನಿಂದಲೇ ನೀರು ಬಿಡಲು ತೀರ್ಮಾನ ಮಾಡಿದ್ದೇವೆ ರೈತರ ಖುಷಿ ಇದ್ರೆ ಎಲ್ಲರಿಗೂ ಅನಕೂಲವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

TV24 News Desk
the authorTV24 News Desk

Leave a Reply