ಬೆಳಗಾವಿ:
ಇಂದು ಹುಕ್ಕೇರಿಯ ವಿಶ್ವರಾಜ್ ಭವನದಲ್ಲಿ ಹುಕ್ಕೇರಿ ತಾಲೂಕಿನ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಸೇರಿದಂತೆ ಕತ್ತಿ ಕುಟುಂಬದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಇತ್ತಿಚಿಗೆ ಹುಕ್ಕೇರಿ ಕ್ಷೇತ್ರದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ರಮೇಶ ಕತ್ತಿ ಮುಕ್ತವಾಗಿ ಮಾತನಾಡಿದರು. ಹುಕ್ಕೇರಿ ತಾಲೂಕಿನಲ್ಲಿ ಯಾರಿಗೂ ನಾವು ಬರಲು ಬಿಡಲ್ಲ ಎಂದು ಜನಸ್ತೋಮದ ಮುಂದೆಯೇ ಹೇಳಿದರು. ನಾವು ಕಾಕಾ ಮಗಾ( ಚಿಕ್ಕಪ್ಪ ಹಾಗೂ ಮಗ ನಿಖಿಲ್ ಕತ್ತಿ) ಗಟ್ಟಿಯಾಗಿದ್ದೆವೆ. ಜೊತೆಗೆ ಪೃತ್ವಿ ಹಾಗೂ ಪವನ್ ಕತ್ತಿ ಸಹ ಜೊತೆಗಿದ್ದಾರೆ. ನಾವು ನಾಲ್ಕು ಜನ ನಾಲ್ಕು ದಿಕ್ಕಿಗೆ ಇರುತ್ತೆವೆ.ನಿಮ್ಮಮನೆಯ ಹೊಸ್ತಿಲ ಸೇವೆ ಮಾಡಲು ನಾವು ನಾಲ್ಕು ಜನ ಗಟ್ಟಿಯಾಗಿದ್ದೆವೆ.ಹೊರಗಿನವರಿಗೆ ನಮ್ಮ ತಾಲೂಕಿನಲ್ಲಿ ಬರುವ ತಾಕತ್ತೂ ಇಲ್ಲ. ಬರಲು ಬಿರೋದು ಇಲ್ಲ. ಬರಲು ಬಿಡೋದು ಬೇಡ ಎಂದು ಮಾರ್ಮಿಕವಾಗಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ರಮೇಶ ಕತ್ತಿ ಹರಿಹಾಯ್ದರು.ಹೊರಗಿನವರು ಬಂದು ಈ ತಾಲೂಕು ಆಳುತ್ತೆವೆ ಎಂದುಕೊಂಡಿದ್ದರೆ ಅದನ್ನು ತಲೆಯಿಂದ ತೆಗೆಯಿರಿ ಎಂದು ಈ ಸಂದರ್ಬದಲ್ಲಿ ಹೇಳುತ್ತೆನೆ ಎಂದು ವಿರೋಧಿಗಳಿಗೆ ನೇರವಾಗಿಯೇ ರಮೇಶ ಕತ್ತಿ ಹೇಳಿದರು.
ನಾವು ತಳದಿಂದ ಗಟ್ಟಿಯಾಗಿರಬೇಕು.
ಅಪ್ಪಣ್ಣಗೌಡರ ಫೋಟೊ ಇರಬೇಕು,ಬಸನಗೌಡರ ಫೋಟೊ ಇರಬೇಕು, ವಿಶ್ವನಾಥ ಕತ್ತಿ ಫೋಟೊ ಇರಬೇಕು,ಎನ್ ಕೆ ಖೋತ್ ಅವರ ಫೋಟೊ ಇರಬೇಕು. ಉಮೇಶ ಕತ್ತಿ ಫೋಟೊ ಇರಬೇಕು. ನಮ್ಮ ವಯಕ್ತಿಕ ಜಗಳಗಳು ಏನೇ ಇದ್ದರೂ ಸಹ ನಾವು ಗಟ್ಟಿಯಾಗಿರಬೇಕು ಎಂದು ಸಂದೇಶ ನೀಡಿದರು.
ಸಣ್ಣ ಸಣ್ಣ ಜಗಳಗಳನ್ನುಮರೆತು ನಾವೆಲ್ಲರೂ ಒಂದೇ ಎನ್ನುವ ರೀತಿಯಲ್ಲಿ ನಾವು ಹೋಗಬೇಕು ಹಾಗಿದ್ದಾಗ ಇಂತಹ 10ಚುನಾವಣೆ ಬಂದರೂ ಸಹ ನಾನು ನೋಡಿಕೊಳ್ಳಲು ಗಟ್ಟಿಯಾಗಿದ್ದೆನೆ ಎಂದು ರಮೇಶ ಕತ್ತಿ ಹೇಳಿದರು. ಆ ಮೂಲಕವಾಗಿ ತಾಲೂಕಿನ ಹಿಡಿತ ಸಾಧಿಸಿಸುತ್ತಿರುವ ತಮ್ಮ ವಿರೋಧಿಗಳಿಗೆ ಗಟ್ಟಿಯಾದ ಸಂದೇಶವನ್ನು ರಮೇಶ ಕತ್ತಿ ನೀಡಿದರು.


