cinema

ಬಿಗ್ ಬಾಸ್ ಮನೆಯಲ್ಲಿ ಕೇಳಿದ್ದು ಕೇವಲ ಬೀಪ್.. ಬೀಪ್.. ಬೀಪ್..​;

ಬಿಗ್ ಬಾಸ್​’ನಲ್ಲಿ ಜಗದೀಶ್ ಹಾಗೂ ಉಳಿದ ಸ್ಪರ್ಧಿಗಳ ಮಧ್ಯೆ ಕಿರಿಕ್ ಆಗಿದೆ. ಇದಕ್ಕೆ ಕಾರಣ ಆಗಿದ್ದು ಜಗದೀಶ್ ಅವರು. ಹಂಸಾ ವಿರುದ್ಧ ಅವರು ಬಳಕೆ ಮಾಡಿದ ಶಬ್ದ ಎಲ್ಲರ ಕೋಪಕ್ಕೆ ಕಾರಣ ಆಗಿದೆ. ಇದು ಇಡೀ ಮನೆ ಹೊತ್ತು ಉರಿಯಲು ಕಾರಣವಾಯಿತು.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸೆಪ್ಟೆಂಬರ್ 17 ಎಪಿಸೋಡ್​ನಲ್ಲಿ ಸ್ಪರ್ಧಿಗಳ ಬಾಯಿಂದ ಕೆಟ್ಟ ಶಬ್ದಗಳು ಸುಲಲಿತವಾಗಿ ಬಂದಿವೆ. ಬಿಗ್ ಬಾಸ್ ಕೂಗುತ್ತಿದ್ದರೂ ಎಲ್ಲರೂ ಮಿತಿ ಮೀರಿ ನಡೆದುಕೊಂಡಿದ್ದಾರೆ. ಇದರಿಂದ ಸ್ವತಃ ಬಿಗ್ ಬಾಸ್ ಟೆಂಪರ್ ಕಳೆದುಕೊಳ್ಳುವಂತೆ ಆಗಿದೆ. ಸದ್ಯ ಬಿಗ್ ಬಾಸ್ ವಾತಾವರಣ ಹದಗೆಟ್ಟಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರೋ ಸಾಧ್ಯತೆ ಇತ್ತು. ಹೀಗಾಗಿ, ಇಬ್ಬರನ್ನು ಬಿಗ್ ಬಾಸ್ ಹೊರಕ್ಕೆ ಕಳುಹಿಸಿದ್ದಾರೆ.

ಬಿಗ್ ಬಾಸ್​’ನಲ್ಲಿ ಜಗದೀಶ್ ಹಾಗೂ ಉಳಿದ ಸ್ಪರ್ಧಿಗಳ ಮಧ್ಯೆ ಕಿರಿಕ್ ಆಗಿದೆ. ಇದಕ್ಕೆ ಕಾರಣ ಆಗಿದ್ದು ಜಗದೀಶ್ ಅವರು. ಹಂಸಾ ವಿರುದ್ಧ ಅವರು ಬಳಕೆ ಮಾಡಿದ ಶಬ್ದ ಎಲ್ಲರ ಕೋಪಕ್ಕೆ ಕಾರಣ ಆಗಿದೆ. ಇದು ಇಡೀ ಮನೆ ಹೊತ್ತು ಉರಿಯಲು ಕಾರಣವಾಯಿತು. ಜಗದೀಶ್ ಅವರು ಬಳಸಿದ ಅವಾಚ್ಯ ಶಬ್ದದಿಂದ ಎಲ್ಲರೂ ಅವರ ವಿರುದ್ಧ ಸಿಡಿದೆದ್ದರು.

‘ನನ್ನ ಗಂಡನ ಸಾಯಿಸೋಕೆ ಅವರು ಯಾರು? ಇದಕ್ಕೆ ನೀವೇ ಏನಾದರೂ ಮಾಡ್ತೀರಾ ಅಥವಾ ನಾವೇ ಪರಿಹಾರ ಕಂಡುಕೊಳ್ಳಬೇಕಾ’ ಎಂದು ಹಂಸಾ ಅವರು ಬಿಗ್ ಬಾಸ್ ಕ್ಯಾಮರಾ ಎದುರು ಬಂದು ಅವಾಜ್ ಹಾಕಿದರು. ಆ ಬಳಿಕ ಬಿಗ್ ಬಾಸ್​ ಎಲ್ಲರ ಬಳಿ ಸೋಫಾ ಮೇಲೆ ಕೂರುವಂತೆ ಹೇಳಿದರು. ಆದರೆ, ಮನೆಯ ವಾತಾವರಣ ಹದಗೆಡುತ್ತಲೇ ಹೋಯಿತು. ಬಿಗ್ ಬಾಸ್ ಆದೇಶದ ಮಧ್ಯೆಯೂ ಜಗದೀಶ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿದರು.

ರಂಜಿತ್ ಅವರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದರು ಜಗದೀಶ್. ರಂಜಿತ್ ಕೂಡ ಕೋಪದಿಂದ ಕೂಗಾಡಿದರು. ಇಡೀ ಎಪಿಸೋಡ್ ತುಂಬಾ ಬೈಗುಳಗಳೇ ಇದ್ದಿದ್ದರಿಂದ ಬಿಗ್ ಬಾಸ್​ಗೆ ಬೀಪ್ ಹಾಕಿ ಹಾಕಿ ಸಾಕಾಯಿತು. ವೀಕ್ಷಕರಿಗೆ ಇದು ಅಸಹ್ಯ ಹುಟ್ಟಿಸಿತು.

TV24 News Desk
the authorTV24 News Desk

Leave a Reply