ಕ್ರೈಂಜಿಲ್ಲೆಬೆಳಗಾವಿ

ಶ್ರೀರಾಮಸೇನಾ ಕಾರ್ಯಕರ್ತರನ್ನು ಥಳಿಸಿದ ಪ್ರಕರಣ ಎಸ್ಪಿ ಹೇಳಿದ್ದಿಷ್ಟು!

ಬೆಳಗಾವಿ:
ಬೆಳಗಾವಿಯಲ್ಲಿ ಗೋ ರಕ್ಷಕರನ್ನ ಮರಕ್ಕೆ ಕಟ್ಟಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಸ್‌ಪಿ ಭೀಮಾಶಂಕರ್ ಗುಳೇದ್ ಸುದ್ಧಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಅವರು ಮೊನ್ನೆ ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ದುರಾದೃಷ್ಟಕರ್ ಘಟನೆ ನಡೆದಿದೆ
ಅದರ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದೆ. ಆ ಘಟನೆಯ ನೊಂದವರನ್ನ ಸಂಪರ್ಕಿಸಿದಾಗ ಅವರು ಸಿಕ್ಕಿಲ್ಲ ಇದರಿಂದ ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. 26ರಂದು ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ತಡೆದಿದ್ದರು.ಐದು ಹಸುಗಳು ವಾಹನದಲ್ಲಿದ್ದವು
ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು.ಈ ವೇಳೆ ಇಬ್ಬರು ಪರಸ್ಪರ ಯಾವುದೇ ತಕರಾರು ಇರಲ್ಲ ಅಂತಾ ಪತ್ರ ಬರೆದುಕೊಟ್ಟು ಹೋಗಿದ್ದರು.ನಂತರ ಆ ದಿನವೇ ಗೋವುಗಳನ್ನ ಗೋ ಶಾಲೆಗೆ ಕಳುಹಿಸಿ ಕೊಟ್ಟಿದ್ದರು.28ರಂದು ಗೋ ಶಾಲೆಗೆ ಹೋಗಿ ದನದ ಮಾಲೀಕ ಗೋ ಬಿಡಿಸಿಕೊಳ್ಳಲು ಹೋಗಿದ್ದ ಆತನನ್ನ ಶ್ರೀರಾಮ ಸೇನೆ ಕಾರ್ಯಕರ್ತರು
ಹಿಂಬಾಲಿಸಿಕೊಂಡು ಹೋಗಿ ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗಿದ್ದರು ಮನೆಯಲ್ಲಿ ಹೆಣ್ಣು ಮಕ್ಕಳಿರುವ ಸಂದರ್ಭದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗುತ್ತಾರೆ ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಬರ್ತಾರೆ ಬಂದು ಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಅಂತಾ ಬರೆದುಕೊಟ್ಟು ಹೋಗಿದ್ದರು.
ನಿನ್ನೆ ವಿಡಿಯೋ ಹೊರ ಬಂದಾಗ ನೋಡಿ ನಮಗೂ ಬಹಳ ಬೇಜಾರು ಆಯ್ತು ಇದೊಂದು ಘೋರ ಪ್ರಕರಣ ಆಗಿದ್ದರಿಂದ ಒಂದು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದೇವೆ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ
ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಇದರಲ್ಲಿ ಓರ್ವ ಹಿಂದು ಮೂರು ಜನ ಮುಸ್ಲಿಂಮರನ್ನ ಬಂದಿಸಿದ್ದೇವೆ
ಇದರಲ್ಲಿ ಮುಸ್ಲಿಮರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಲ್ಲ ಎಲ್ಲರೂ ಸೇರಿಕೊಂಡು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ
ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆ ಸೇರಿ ಇನ್ನೂಳಿದವರ ಮೇಲೆ ಎಫ್‌ಐಆರ್ ಆಗಿದೆ.ಶಿವ ಪುತ್ರ ಸನದಿ ಎಂಬ ಡ್ರೈವರ್ ದೂರು ದಾಖಲಾಗಿದೆ ಮಹಾವೀರ್ ಗೆ ಕಲಬುರಗಿಗೆ ಗಡಿ ಪಾರು ಮಾಡಲಾಗಿತ್ತು ಗಡಿ ಪಾರಾದ ರೌಡಿ ಶೀಟರ್ ಮಹಾವೀರ್ ಇಲ್ಲಿ ಯಾಕೆ ಬಂದಿದ್ದ ಅನ್ನೊದನ್ನ‌ ತನಿಖೆ ಮಾಡುತ್ತೆವೆ.ಈ ರೀತಿ ರೌಡಿ ಶೀಟರ್ ಯಾವುದೋ ಒಂದು ಸಂಘಟನೆ ಹೆಸರು ಹೇಳಿಕೊಂಡಿದ್ದಾನೆ‌ ಒಬ್ಬ ರೌಡಿ ಶೀಟರ್ ಗೆ ಸಂಘಟನೆಯವರು ಯಾಕೆ ಸಪೋರ್ಟ್ ಮಾಡ್ತಿದ್ದಾರೆ ಎಂದು ಎಸ್ಪಿ ಪ್ರಶ್ನೆ ಮಾಡಿದರು.
ಇಂತವರ ಪರ ಪ್ರತಿಭಟನೆ ಮಾಡಲು ನಾವು ಅವಕಾಶ ಕೊಡಲ್ಲ ಎಂದು ಎಸ್ಪಿ ಭೀಮಾಶಂಕರ್ ಗುಳೇದ ಹೇಳಿದರು‌.

TV24 News Desk
the authorTV24 News Desk

Leave a Reply