Uncategorized

ಆರು ತಿಂಗಳ ಹಿಂದೆ ಕೊಲೆ ಮಾಡಿ ಹೂತಿದ್ದ ಶವವನ್ನು ಹೊರತೆಗೆದ ಪೊಲೀಸರು! ಬೆಚ್ಚಿ ಬಿದ್ದ ಖಡಕಲಾಟ ಜನ!

ಚಿಕ್ಕೋಡಿ:

ಅನೈತಿಕ ಸಂಬಂಧಕ್ಕಾಗಿ ಪತಿಯ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಎಸಿ ಎಸ್ ಎಸ್ ಸಂಪಗಾವಿ ನೇತೃತ್ವದಲ್ಲಿ ಹೂತಿದ್ದ ಶವವನ್ನು ಪೊಲೀಸರು ಹೊರ ತೆಗೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದ್ದ ಘಟನೆ ನಡೆದಿತ್ತು. ಕಟ್ಟಿಕೊಂಡ ಹೆಂಡತಿಯೇ ತನ್ನ ಮಾವನ ಮಗನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿ ನಂತರ ಆತನ ಶವವನ್ನು ಗದ್ದೆಯಲ್ಲಿ ಹೂತು ನಂತರ ಏನೂ ಆಗದಂತೆ ಮನೆ ಸೇರಿದ್ದಳು. ಗಂಡ ಎಲ್ಲಿ ಎಂದು ಕೇಳಿದರೆ ಆತ ಪರ ಊರಿಗೆ ಕುರಿ ಮೇಯಿಸಲು ಹೋಗಿದ್ದಾನೆ ಎಂದು ಸಂಬಂಧಿಕರ ಮುಂದೆ ಕಥೆ ಕಟ್ಟಿದ್ದಳು.ಕೊಲೆಯಾದ ದುರ್ದೈವಿಯನ್ನು ರಾಘು ಗಾವಡೆ(40) ಎಂದು ಗುರುತಿಸಲಾಗಿದ್ದು ಇಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ  ಕೊಲೆ ಮಾಡಿ ಅವರದ್ದೆ ಜಮೀನಲ್ಲಿ ಹೂತ್ತಿದ ಶವವನ್ನು ಪೊಲೀಸರು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕೊಲೆಯಾದ ರಾಘು ಗಾವಡೆಯನ್ನು ಆತನ ಪತ್ನಿ ಬಂಗಾರಿ ಗಾವಡೆ ಹಾಗೂ ಪ್ರಿಯಕರ ರಾಮಾ ರಾಣಗೆ ಕೊಲೆಗೈದು ಗದ್ದೆಯಲ್ಲಿ ಹೂತು ಮನೆ ಸೇರಿದ್ದರು. ರಾಘು ಗಾವಡೆ ಕುಟುಂಬಸ್ಥರು ಅಣ್ಣ ಎಲ್ಲಿ ಎಲ್ಲಿ ಎಂದು ಬಂಗಾರಿಯನ್ನು ಪ್ರಶ್ನೆ ಮಾಡಿ ಮಾಡಿ ಬೇಸತ್ತಿದ್ದರು.ರಾಘು ಗಾವಡೆ ತಾಯಿ ತೀರಿ ಹೋದಾಗಲೂ ಸಹ ರಾಘು ಗಾವಡೆ ಮನೆಗೆ ಬಾರದಿರುವುದು ಮನೆಯವರ ಕುತೂಹಲ ಹಾಗೂ ಆತಂಕವನ್ನು ಹೆಚ್ಚು‌ಮಾಡಿತ್ತು. ಊರಿನ ಹಿರಿಯರೊಂದಿಗೆ ಸೇರಿಕೊಂಡು ಬಂಗಾರಿಯನ್ನು ಪ್ರಶ್ನೆ ಮಾಡಿದಾಗ ಬಂಗಾರಿ ತಾನೇ ತನ್ನ ಮಾವನ ಮಗ ರಾಮಾ ಜೊತೆಗೆ ಸೇರಿ ಕೊಲೆ ಮಾಡಿದ್ದಾಗಿ ಒಪ್ಪಿಕೊಡಿದ್ದಳು. ಇದಾದ ಬಳಿಕ ರಾಘು ಮನೆಯವರು ವಿಚಾರನ್ನು ಪೊಲೀಸರಿಗೆ ತಿಳಿಸಿದ್ದರು. ಸದ್ಯ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಶವ ಹೊರತೆಗೆದು ತನಿಖೆ ನಡೆಸಿದ್ದಾರೆ.ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಹಾಗೂ ವೈದ್ಯಾಧಿಕಾರಿಗಳ ತಂಡ ಭೇಟಿ ‌ನೀಡಿ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ಖಡಕಲಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.

TV24 News Desk
the authorTV24 News Desk

Leave a Reply

error: Content is protected !!