ಜಿಲ್ಲೆಬೆಳಗಾವಿ

ರಾಜ್ಯಕ್ಕೆ ಬಂದ ಸುರ್ಜೇವಾಲ! ಅವರ ಸಭೆಗೆ ರಾಜು ಕಾಗೆ ಯಾಕ್ ಹೋಗ್ಲಿಲ್ಲ?

ಬೆಳಗಾವಿ:

ಶಾಸಕರ ಒನ್ ಟು ಒನ್ ಸಭೆ ಮಾಡಲು ಕಾಂಗ್ರೇಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಬಂದಿದ್ದಾರೆ. ಮುಖ್ಯವಾಗಿ ಇತ್ತಿಗೆ ರಾಜ್ಯದಲ್ಲಿ ಕೈ ಶಾಸಕರಾದ ಬಿ ಆರ್ ಪಾಟೀಲ್ ಹಾಗೂ ರಾಜು ಕಾಗೆ ಸ್ವಸರ್ಕಾರದ ವಿರುದ್ಧವೇ ಗುಡುಗಿದ್ದರು. ಸಧ್ಯ ಸುರ್ಜೇವಾಲ‌ ಬೆಂಗಳೂರಿಗೆ ಬಂದರೂ ಸಹ ರಾಜು ಕಾಗೆ ಬೆಳಗಾವಿಯಲ್ಲಿ ತಮ್ಮ ಇಲಾಖೆಯ ಮೀಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಮಧ್ಯಾಹ್ನ ರಾಜು ಕಾಗೆ ಜೊತೆಗೆ ಸುರ್ಜೇವಾಲಾ ಮೀಟಿಂಗ್ ಗೆ ಸಮಯ ನಿಗಧಿಯಾಗಿತ್ತು, ಅಲ್ಲದೇ ಮೀಟಿಂಗ್ ಗೆ ಅಟೆಂಡ್ ಆಗುವಂತೆ ರಾಜು ಕಾಗೆಯವರಿಗೆ ರಾತ್ರಿಯೇ ಕರೆ ಮಾಡಿ ತಿಳಿಸಲಾಗಿತ್ತು ಎನ್ನಲಾಗಿದ್ದು ಸಧ್ಯ ಸಭೆಯಿಂದ ರಾಜು ಕಾಗೆ ದೂರ ಉಳಿದಿದ್ದಾರೆ. ಬೆಳಗಾವಿಯ ಕೆಪಿಟಿಸಿಎಲ್ ಹಾಲ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಗೆ ರಾಜು ಕಾಗೆ ಹಾಜರಾಗಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮ ‌ಇದ್ದಿದ್ದರಿಂದ ರಾಜು ಕಾಗೆ ಸಭೆಗೆ ಹೋಗಲಾಗಿಲ್ಲ ಎನ್ನಲಾಗಿದೆ. ನಾಳೆ ಬೆಳಗ್ಗೆ 11 ಕ್ಕೆ ಸುರ್ಜೇವಾಲರನ್ನು ರಾಜು ಕಾಗೆ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!