Uncategorized

ಹೆಚ್ಚಿನ ಬಡ್ಡಿದಂಧೆ ಆರೋಪ‌ ಅಪ್ಪ ಮಗನ ಮೇಲೆ ಕೇಸ್ ಜಡಿದ ಗೋಕಾಕ ಪೊಲೀಸರು!

ಬೆಳಗಾವಿ:

ಕೆ ಎಸ್ ಪಿ ಆಪ್ ಮೂಲಕದ ದಾಖಲಾಗಿದ್ದ ಅರ್ಜಿ ಆಧರಿಸಿ ಗೋಕಾಕ ನಗರದಲ್ಲಿ ಇಬ್ಬರು ಬಡ್ಡಿ ದಂಧೆಕೋರರ ಪ್ರಕರಣ ದಾಖಲಿಸಿದ್ದಾರೆ.ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಅಪ್ಪ ಮಗನ ಮೇಲೆ ಗೋಕಾಕ ಶಹರ ಪೊಲೀಸ್ ಠಾಣೆಯ ಪೊಲೀಸರು ಕೇಸ್ ದಾಖಲಿಸಿದ್ದಾರೆ.ಯಲ್ಲಪ್ಪ ಬಿರಾಜಗೋಳ,‌ವಿಠ್ಠಲ್ ಯಲ್ಲಪ್ಪ ಬಿರಾಜಗೋಳ ಎಂಬುವವರ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿಗಳ ವಿರುದ್ಧ ಕೆ ಎಸ್ ಪಿ ಆಪ್ ನಲ್ಲಿ ದೂರು ಅರ್ಜಿ ದಾಖಲಾಗಿತ್ತು.
ಅರ್ಜಿ ಆದರಿಸಿ ಸರ್ಚ್ ವಾರಂಟ್ ಪಡೆದು ಮನೆಗೆ ತೆರಳಿದ್ದ ಪೊಲೀಸರಿಗೆ ಮನೆ ಪರಿಶೀಲನೆ ವೇಳೆ ಅಕ್ರಮ ಬಡ್ಡಿ ದಂಧೆಯ ಹಲವು ದಾಖಲೆ ಪತ್ತೆಯಾಗಿವೆ.ಅಲ್ಲದೆ ದಾಖಲೆ ಪರಿಶೀಲನೆ ವೇಳೆ ಮನೆಯಲ್ಲಿ 6.15 ಲಕ್ಷ(6,15000) ನಗದು ಪತ್ತೆಯಾಗಿದ್ದು ಹಲವು ಬ್ಲಾಂಕ್ ಚೆಕ್,ಪ್ರಾಮಿಸರಿ ನೋಟ್ಸ್, ಖಾಲಿ ಬಾಂಡ್ ಸೇರಿ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಆರೋಪಿರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು.
Karnataka prohibition of charging exorbitant interest act 2004 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತಂದೆ ಮಗನ ವಿಚಾರಣೆ ಮುಂದುವರೆಸಿದ್ದಾರೆ.ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!