Uncategorized

ನಮ್ಮಲ್ಲಿ ಬಂದ್ ಗಿಂದ್ ಏನಿಲ್ಲ್ರಿ! ಎಲ್ಲಾ ಆರಾಮ್ ನಡದೈತ್ರಿ!

ಬೆಳಗಾವಿ:

ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ನಿರಸ ಪ್ರಿತಿಕ್ರಿಯೇ ಉಂಟಾಗಿದೆ. ಬೆಳಗಾವಿಯ ಬಹುತೇಕ ಕನ್ನಡಪರ ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನು ಮಾತ್ರ ಘೋಷಣೆ ಮಾಡಿವೆ.ಬಸ್ ನಿಲ್ದಾಣದಲ್ಲಿ ಎಂದಿನಂತೆ ಸಾರ್ವಜನಿಕರ ಓಡಾಟ ಹಾಗೂ ಬಸ್ಸುಗಳ ಕಾರ್ಯಾಚರಣೆ ಕಂಡು ಬಂದಿದ್ದು ಬೆಳಗಾವಿಯಿಂದ ಹೊರರಾಜ್ಯ ಸೇರಿದಂಗೆ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಕಡೆಗೆ ಬಸ್ ಸಂಚಾರ ಎಂದಿನಂತೆ ಪ್ರಾರಂಭವಿದೆ. ಮುಂಜಾಗೃತಾ ಕ್ರಮವಾಗಿ ಬಸ್ ನಿಲ್ದಾಣದ ಬಳಿ ಕೆ ಎಸ್ ಆರ್ ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.ಇನ್ನು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ಮಾಡಲು ಕರೆ ಹಿನ್ನೆಲೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಭೋರಸೆ ಪರಿಸ್ಥಿತಿ ಹಾಗೂ ಭದ್ರತೆಯನ್ನು ಪರಿಶೀಲನೆ ನಡೆಸಿದರು.ಇದಲ್ಲವೇ ಇದೇ ವೇಳೆ ಮಾತನಾಡಿದ ಭೋರಸೆ ಯಾರೂ ಕೂಡ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಬಾರದು ಎಂದು ಎಚ್ಚರಿಕೆಯನ್ನೂ ಸಹ ನೀಡಿದರು.ಹೈವೇ ಸೇರಿದಂತೆ ಟೋಲ್ ನಾಕಾ ಭದ್ರತೆಗಾಗಿ ಪ್ಯಾಟ್ರೋಲಿಂಗ್ ಮಾಡಲಾಗುತ್ತಿದೆ. ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಯಾರೂ ಕೂಡ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಬಾರದು.ಕೆಲ ಸಂಘಟನೆಗಳು ಪ್ರತಿಭಟನೆ ಮಾಡಲು ಅವಕಾಶ ಕೇಳಿದ್ದಾರೆ. ಬಸ್ ಹಾಗೂ ಆಟೋಗಳು ಎಂದಿನಂತೆ ಸಂಚಾರ ಮಾಡುತ್ತಿವೆ ಎಂದು ಭೂಷಣ್ ಮಾಹಿತಿ ನೀಡಿದರು.

TV24 News Desk
the authorTV24 News Desk

Leave a Reply

error: Content is protected !!