ಬೈಲಹೊಂಗಲ: ಯುವತಿಯನ್ನು ಚುಡಾಯಿಸಿ ನಾಲ್ಕು ಜನರಿಗೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಬೈಲಹೊಂಗಲ್ ನಗರದ ಬಸವೇಶ್ವರ ಆಶ್ರಯ ಕಾಲಿನಿ ನಡೆದಿದೆ. ಯುವತಿ ಚುಡಾಯಿಸಿದ ಕಾಲೇಜು ವಿದ್ಯಾರ್ಥಿಯನ್ನು ಪಾಲಕರು, ಹಿರಿಯರು ಬುದ್ದಿ ಹೇಳಲು ಹೋದ ಸಂದರ್ಭದಲ್ಲಿ ಅವರ ಮೇಲೆ ಚಾಕುವಿನಿಂದ ನಡೆದಿದೆ. ಸಾದಿಕ ಮಾನಿಯಾರ ಇತನು ಯುವತಿಯೋರ್ವಳನ್ನು ಚುಡಾಯಿಸಿದ ಬಗ್ಗೆ ಬುದ್ದಿ ಹೇಳಲು ಹೋದ ಪಾಲಕರು, ಹಿರಿಯರ ಮೇಲೆ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾನೆಂದು ದೂರು ದಾಖಲಾಗಿದೆ.
ಹಲ್ಲೆಗೊಳಗಾದ ಅತಾವುಲ್ಲಾ ಹುಬ್ಬಳ್ಳಿ, ಮುನಿರ ಬೇಪಾರಿ, ರಫೀಕ ಕೊರವಿನಕೊಪ್ಪ ಮೆಹಬೂಬ ಹುಬ್ಬಳ್ಳಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬೈಲಹೊಂಗಲ ನಗರದ ಹಾಗೂ ಬೆಳಗಾವಿ ಜಿಲ್ಲಾಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








