ಬೆಳಗಾವಿ

ಮಹಾ ಮಳೆಯಬ್ಬರ ಚಿಕ್ಕೋಡಿಯಲ್ಲಿ 11 ಸೇತುವೆ ಹಾಗೂ ದರ್ಗಾ ಮುಳುಗಡೆ!

ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರೆದ ಪರಿಣಾಮ ಕೃಷ್ಣಾ ನದಿ ನೀರಿನ ಒಳಹರಿಯುವಿಕೆಯಲ್ಲಿ ಭಾರಿ ಏರಿಕೆಯಾಗಿದೆ.ಭಾರಿ ಮಳೆಯಿಂದಾಗಿ ಸಧ್ಯ ಕೃಷ್ಣಾ,ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ‌. ಕೃಷ್ಣಾ ನದಿಯ ಒಳ ಹರಿವು ಒಂದೇ ದಿನಕ್ಕೆ 22 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದೆ.ನಿನ್ನೆ 70 ಸಾವಿರ ಕ್ಯೂಸೆಕ್ ದಾಖಲಾಗಿದ್ದ ಒಳ ಹರಿವಿನ ಪ್ರಮಾಣ ಇಂದು 92 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದೆ. ದೂದಗಂಗಾ ನದಿ ನೀರಿನಲ್ಲೂ ಗಣನೀಯ ಏರಿಕೆಯಾಗಿದೆ.ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 11 ಸೇತುವೆಗಳು ಸಧ್ಯ ಜಪಾವೃತವಾಗಿವೆ.
22 ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿದ್ದ ಸೇತುವೆಗಳು ಮುಳುಗಡೆಯಾಗಿದ್ದರಿಂದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು – ಕಲ್ಲೋಳ, ಸೇತುವೆ ಭಾವನಸೌಂದತ್ತಿ – ಮಾಂಜರಿ ಸೇತುವೆ. ದೂದಗಂಗಾ ನದಿಯ ಮಲ್ಲಿಕವಾಡ – ದತ್ತವಾಡ, ಸೇತುವೆ ಕಾರದಗಾ – ಭೋಜ, ಭೋಜವಾಡಿ – ಕಾರದಗಾ, ಎಕ್ಸಂಬಾ – ದತ್ತವಾಡ ಸೇತುವೆ ವೇದಗಂಗಾ ನದಿಯ ಅಕ್ಕೋಳ – ಸಿದ್ನಾಳ,ಸೇತುವೆ ಜತ್ರಾಟ – ಭೀವಶಿ, ಸೇತುವೆ ಭಾರವಾಡ – ಕುನ್ನೂರು,ಸೇತುವೆ ಬೋಜವಾಡಿ – ಕುನ್ನೂರು ಸೇತುವೆಗಳು ಮುಳುಗಡೆಯಾಗಿವೆ.ಇನ್ಮು ಹೀರಣ್ಯಕೇಶಿ ನದಿಗೆ ಅಡ್ಡಲಾಗಿರುವ ಮದಮಕ್ಕನಾಳ – ಯರನಾಳ ಸೇತುವೆ ಕೂಡ ಮುಳುಗಡೆಯಾಗಿದೆ.ದೂದಗಂಗಾ ನದಿ ತೀರದ ಬಂಗಾಲಿ ಬಾಬಾ ದರ್ಗಾಕ್ಕೆ ದೂದಗಂಗಾ ನದಿ ನೀರು ನುಗ್ಗಿ ದರ್ಗಾ ಭಾಗಶಃ ನೀರಲ್ಲಿ ಮುಳುಗಿದೆ.ಸಧ್ಯ ಮುಳುಗಡೆಯಾದ ಸೇತುವೆಗಳಿಗೆ ಪರ್ಯಾಯ ಮಾರ್ಗಗಳಿದ್ದ ಜನರು ಪರ್ಯಾಯ ಮಾರ್ಗದ ಮೂಲಕ ಜನರ ಸಂಚಾರ ಮಾಡುತ್ತಿದ್ದಾರೆ‌.ನದಿ ತೀರಕ್ಕೆ ತೆರಳದಂತೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿದೆ.

TV24 News Desk
the authorTV24 News Desk

Leave a Reply

error: Content is protected !!