ಬೆಳಗಾವಿ:
ಬೆಳಗಾವಿ ನಗರ ಪೊಲೀಸರಿಗೆ ತಮ್ಮ ಅನುದಾನದಿಂದ 13 ಬೈಕುಗಳನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅಸೀಫ್ ಸೇಠ್ ವಿತರಣೆ ಮಾಡಿದರು. ಬೆಳಗಾವಿ ನಗರದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಸಿರು ನಿಶಾನೆ ತೋರಿಸುವುದರ ಮೂಲಕ ಬೈಕುಗಳನ್ನು ನಗರ ಪೊಲೀಸ್ ಆಯುಕ್ತರ ಸುಪರ್ದಿಗೆ ನೀಡಿದರು. ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ತೆರಳಲು ಬೈಕುಗಳು ಉಪಯೋಗವಾಗಲಿಗೆ ಎಂದು ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆಯವರು ಮಾಧ್ಯಮ ಪ್ರಕಟಣೆಯಲ್ಲಿ ತಳಿಸಿದ್ದು ಆಸೀಫ್ ಸೇಠ್ ಅವರು ತಮ್ಮ ಶಾಸಕರ ನಿಧಿ 25₹ ಲಕ್ಷ ರೂಪಾಯಿಗಳಲ್ಲಿ ನಗರ ಪೊಲೀಸರಿಗೆ ಒಟ್ಟು 13 ಕಪ್ಪು ಬಣ್ಣದ ದ್ವಿಚಕ್ರವಾಹನಗಳನ್ನು ವಿತರಣೆ ಮಾಡಿದ್ದಾರೆ.



