ಬೆಳಗಾವಿ:
ಬೆಳಗಾವಿಯಲ್ಲಿ ಇತ್ತೀಚೆಗೆ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ನಡೆಸಿದ ಪ್ರತಿಭಟನಾ ರ್ಯಾಲಿಯ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಎಫ್ಐಆರ್ ದಾಖಲಿಸಿಲ್ಲ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮಾವೇಶದ ಭದ್ರತೆಗೆ ಬಂದಿದ್ದ ಧಾರವಾಡದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ.ಭರಮನಿ ಮೇಲೆ ಸಿಎಂ ಕೈ ಎತ್ತಿರುವ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದರು.
ಕಳೆದ 28/4/2025 ರಂದು ಸಮಾವೇಶದ ವೇದಿಕೆಯಲ್ಲಿಯೇ ಎನ್.ವಿ.ಭರಮನಿ ಅವರ ಮೇಲೆ ಬೇದರಿಕೆ ಹಾಕಿ ಕೈ ಎತ್ತಿದ ಪ್ರಕರಣ ಕುರಿತು ಕ್ಯಾಂಪ್ ಪೊಲೀಸರು ನನಗೆ ಹಿಂಬರಹ ನೀಡಿ ದೂರಿನ ಅರ್ಜಿಯಲ್ಲಿರುವ ನೊಂದ ವ್ಯಕ್ತಿ ದೂರು ನೀಡಿಲ್ಲ. ಅವರು ದೂರು ನೀಡಿದರೇ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ ಎಂದರು.
ಬೆಂಗಳೂರಿನ ವಿಧಾನಸೌಧದಲ್ಲಿ ಸರಕಾರದ ಮುಖ್ಯಕಾರ್ಯದರ್ಶಿ ಮೇಲೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂದು ರವಿಕುಮಾರ ಅವರ ಮೇಲೆ ದೂರು ನೀಡಿದ್ದು ಸಾಮಾಜಿಕ ಕಾರ್ಯಕರ್ತ. ಬೆಂಗಳೂರಿನ ವಿಧಾನಸೌಧದ ಪೊಲೀಸರಿಗೆ ಒಂದು ಕಾನೂನು, ಬೆಳಗಾವಿ ಕ್ಯಾಂಪ್ ಪೊಲೀಸರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಕ್ಯಾಂಪ್ ಪೊಲೀಸರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸದಿದ್ದರೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು. ಕಾನೂನು ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ವಿಪಕ್ಷಗಳು ಹೋರಾಟ ಮಾಡದಿದ್ದರೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದರು.



