ಅಂತರಾಷ್ಟ್ರೀಯಕ್ರೀಡೆ

ಶ್ರೀಲಂಕಾ ಸ್ಟಾರ್ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅರೆಸ್ಟ್

ಸಿಡ್ನಿ: ಶ್ರೀಲಂಕಾ ಕ್ರಿಕೆಟ್  ತಂಡದ  ಬ್ಯಾಟ್ಸಮ್ಯನ  ದನುಷ್ಕಾ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ ನಲ್ಲಿರುವ ಟೀಮ್ ಹೋಟೆಲ್‌ ನಿಂದ ಭಾನುವಾರ ಮುಂಜಾನೆ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಗುಣತಿಲಕ ಅವರನ್ನು ಆಸ್ಟ್ರೇಲಿಯ ಪೊಲೀಸರು ಬಂಧಿಸಿದ್ದಾರೆ. ಆನ್​ಲೈನ್​ನಲ್ಲಿರುವ ಡೇಟಿಂಗ್ ಅಪ್ಲಿಕೇಶನ್​ನ ಮೂಲಕ ಅನೇಕ ದಿನಗಳ ಕಾಲ ಗುಣತಿಲಕ ಅವರು ಮಹಿಳೆ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ಅವರು ನವೆಂಬರ್ 2ರ ಸಂಜೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 29 ವರ್ಷದ ಮಹಿಳೆ ಆರೋಪಿಸಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಹೇಳಿಕೆ ನೀಡಿದ್ದಾರೆ. ಸಿಡ್ನಿ ಸಿಟಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ನಡೆಸಿದ ಆರೋಪ ಹೊರಿಸಲಾಗಿದೆ. ಸಿಡ್ನಿಯ ನ್ಯಾಯಾಲಯ ದನುಷ್ಕಾಗೆ ಜಾಮೀನು ಕೂಡ ನಿರಾಕರಿಸಿದೆ ಎಂದು ತಿಳಿದುಬಂದಿದೆ.

TV24 News Desk
the authorTV24 News Desk

Leave a Reply

error: Content is protected !!