Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

 ಮಹಾ ಸಚಿವರು ಆಗಮಿಸುತ್ತಿರುವ ಹಿನ್ನಲೆ ಗಡಿಯಲ್ಲಿ ಹೆಚ್ಚಿನ ಭದ್ರತೆ 

ನಿಪ್ಪಾಣಿ: ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ಹೆಚ್ಚಿನ ಭದ್ರತೆ ನೀಡುವುದರ ಕುರಿತು ನಿಪ್ಪಾಣಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಸ್ಥಳೀಯ ಪೋಲಿಸ್ ಅಧಿಕಾರಗಳ ವಿಶೇಷ ಸಭೆ ನಡೆಯಿತ್ತು.
 ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪೊಲೀಸ ಅಧಿಕಾರಿಗಳ ಸಭೆಯಲ್ಲಿ ಗಡಿಗೆ ಹೆಚ್ಚಿನ ಭದ್ರತೆ ನೀಡುವುದರ ಕುರಿತು ಹಾಗೂ ಇದೇ ಡಿ 3 ರಂದು  ಮಹಾ ಸಚಿವರ ರಾಜ್ಯ ಪ್ರವೇಶಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನಿಪ್ಪಾಣಿ ಹಾಗೂ ರಾಜ್ಯದ ಯಾವುದೇ ಬಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂದು ಮುಂಜಾಗೃತವಾಗಿ ಸಭೆಯನ್ನು ನಡೆಸಲಾಗಿದೆಎಂದು ಸಭೆಯ ಬಳಿಕ ‌ಮಾಧ್ಯಮಗಳಿಗೆ ಎಸ್ಪಿ ಡಾ.ಸಂಜೀವ್ ಪಾಟೀಲ್ ಹೇಳಿಕೆಯನ್ನು ನೀಡಿದ್ದಾರೆ. ಬೆಳಗಾವಿಗೆ ಮಹಾ ಸಚಿವರು ಆಗಮಿಸುತ್ತಿರುವ ವಿಚಾರದಲ್ಲಿ ನಮ್ಮ ಕರ್ನಾಟಕ ಸರ್ಕಾರದ ಇಲಾಖೆಗಳು ಅವರಿಗೆ ರಾಜ್ಯ ಪ್ರವೇಶ ನೀಡಬೇಕೋ ನೀಡಬಾರದೊ ಎಂದು ತೀರ್ಮಾನಿಸುತ್ತವೆ,ಆ ಬಗ್ಗೆ ನಮಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ, ಬೆಳಗಾವಿ ಜಿಲ್ಲೆಯ ಜನ ಜೀವನ ಎಂದಿನಂತೆ ನಡೆಯಬೇಕು, ಯಾರಿಗೂ ತೊಂದರೆ ಆಗಬಾರದು ಎಂದು ನಾವು ಕ್ರಮ ಕೈಗೊಳ್ಳುತ್ತಿದ್ದೆವೆ,ಯಾರೂ ಸಹ ಯಾವುದೇ ಕಾರಣಕ್ಕೂ ಭಯಭೀತರಾಗೋದು ಬೇಡ ಎಂದು ಮನವಿ ಮಾಡಿದರು. ಸಭೆಯ ಬಳಿಕ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಗಡಿಯಲ್ಲಿರುವ ಚೆಕ್ಕ್ ಪೊಸ್ಟ್ ಗಳಿಗೆ ಬೇಟಿ ನೀಡಿ ಪರಿಸ್ಥಿತಿ ಯನ್ನು ಅವಲೋಕಿಸಿ ಕೆಲವು ಸೂಚನೆಗಳನ್ನು ನೀಡಿದರು
TV24 News Desk
the authorTV24 News Desk

Leave a Reply

error: Content is protected !!