ದೆಹಲಿ: ಸರಕಾರಗಳು ಮಾಡುವ ತಪ್ಪುಗಳನ್ನು ಹೊರತಂದು ಜನರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದ ದೇಶ ಬೆರಳೆಣಿಕೆಯ ಪತ್ರಕರ್ತರಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಪತ್ರಕರ್ತ ರವೀಶ ಕುಮಾರ ಅವರು ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಎನ್ ಡಿಟಿವಿಯನ್ನು ವ್ಯವಸ್ಥಿತವಾಗಿ ಅದಾನಿ ಸಮೂಹ ಖರೀದಿಸಿದಾಗಲೇ ದೇಶದ ಧೀಮಂತ ಪತ್ರಕರ್ತ ರವೀಶಕುಮಾರ ನಿರ್ಗಮನ ನಿರೀಕ್ಷಿಸಲಾಗಿತ್ತು
ಸುದ್ದಿ ವಾಹಿನಿಯು ನಿನ್ನೆ ಬುಧವಾರ ಆಂತರಿಕ ಸಂವಹನದ ಮೂಲಕ ರವೀಶ ಕುಮಾರ ಅವರ ರಾಜೀನಾಮೆ ಘೋಷಿಸಿದೆ.
ರವೀಶ ಕುಮಾರ ಜನಪ್ರಿಯ ಕಾರ್ಯಕ್ರಮಗಳಾದ ‘ಪ್ರೈಮ್ ಟೈಮ್’, ‘ರವೀಶ್ ಕಿ ರಿಪೋರ್ಟ’, ‘ಹಮ್ ಲೋಗ್’ ಮತ್ತು ‘ದೇಶ್ ಕಿ ಬಾತ್’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಅವರ ರಾಜೀನಾಮೆ ತಕ್ಷಣವೇ ಜಾರಿಗೆ ಬಂದಿದೆ ಎಂದು ಎನ್‌ಡಿಟಿವಿ ತಿಳಿಸಿದೆ. “ಕೆಲವೇ ಪತ್ರಕರ್ತರು ರವೀಶ ಅವರಂತೆ ಜನರ ಮೇಲೆ ಪ್ರಭಾವ ಬೀರಿದ್ದಾರೆ.







