Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕಲುಷಿತ ನೀರು ಕುಡಿದು  ೯೪ ಜನ ಅಸ್ವಸ್ಥ,   ಓರ್ವ ವೃದ್ಧನ ಸಾವು

ಬೆಳಗಾವಿ :ಬೆಳಗಾವಿ ಜಿಲ್ಲೆಯ  ರಾಮದುರ್ಗ ತಾಲೂಕಿನ ಮುದ್ದೆನೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು  ೯೪ ಜನ ಅಸ್ವಸ್ಥರಾಗಿದ್ದು,ಓರ್ವ ವೃದ್ಧ ಸಾವನ್ನಪ್ಪಿದ್ದಾನೆ. ಕುಡಿಯುವ ನೀರಿನ ಪೈಪನಲ್ಲಿ ಚರಂಡಿಯ ಕಲುಷಿತ ನೀರು ಮಿಶ್ರಣ ಗೊಂಡಿರುವುದರಿಂದ ಕಲುಷಿತ ನೀರು ಕುಡಿದು  ೯೪ ಜನರು ಅಸ್ವಸ್ಥಗೊಂಡಿದ್ದಾರೆ. ಮುದ್ದೆನೂರು ಗ್ರಾಮದ ೭೦ ವಯಸ್ಸಿನ ಶಿವಪ್ಪ ಎಂಬುವವರು ಸಾವನಪ್ಪಿದ್ದಾರೆ  ನಾಲ್ವರ ಪರಿಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಸ್ವಸ್ಥರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಂತಿ ಭೇದಿ ಸಮಸ್ಯೆಯಿಂದ ಬಳಲುತ್ತಿದ್ದ ಮುದ್ದೆನೂರು ಗ್ರಾಮಕ್ಕೆ ಭೇಟಿ ನೀಡಿದ  ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಅಸ್ವಸ್ಥಗೊಂಡ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!