Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕಾರು- ಸ್ಕೂಟಿ ಡಿಕ್ಕಿ ಅಣ್ಣ ತಂಗಿ ಸಾವು..!

ಚಿಕ್ಕೋಡಿ: ಮಲಿಕವಾಡ – ನಣದಿವಾಡಿ ರಸ್ತೆ ಮಾರ್ಗದಲ್ಲಿ ಸ್ಕೂಟಿ ಹಾಗೂ ಕಾರಿನ ಮದ್ಯ  ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ  ಅಣ್ಣ ತಂಗಿ ಮೃತ ಪಟ್ಟ ಘಟನೆ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಪ್ರಶಾಂತ ನಾಗರಾಜ ತುಳಿಸಿಕಟ್ಟಿ ( 21) ಪ್ರಿಯಾಂಕಾ ನಾಗರಾಜ ತುಳಿಸಿಕಟ್ಟಿ ( 19 ) ಸದಲಗಾ ಪಟ್ಟಣ ನಿವಾಸಿಗಳೆಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಚಿಕ್ಕೋಡಿಯ  ಪರಟಿನಾಗಲಿಂಗೇಶ್ವರ  ದೇವಸ್ಥಾನಕ್ಕೆ ಸ್ಕೂಟಿಯಿಂದ ಹೋಗುವಾಗ ಕಾರು ಮತ್ತು ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ  ಅಣ್ಣ ಪ್ರಶಾಂತ ನಾಗರಾಜ ತುಳಿಸಿಕಟ್ಟಿ ಹಾಗೂ ತಂಗಿ ಪ್ರಿಯಾಂಕಾ ನಾಗರಾಜ ತುಳಿಸಿಕಟ್ಟಿ ರಸ್ತೆಯ ಪಕ್ಕದಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರಿಗೆ ತಕ್ಷಣ ಚಿಕ್ಕೋಡಿ ಆಸ್ಪತ್ರೆ ಸೇರಿಸಿ ಅಲ್ಲಿಂದ ಕೊಲ್ಹಾಪುರದ ಕನ್ನೇರಿ ಆಸ್ಪತ್ರೆಗೆ ಸಾಗಿಸುವಾಗ ರಸ್ತೆ ಮದ್ಯದಲ್ಲಿ ಸಾವನ್ನಪ್ಪಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply

error: Content is protected !!