ಬೆಳಗಾವಿ:
ಸುಮಾರು ದಿನಗಳ ವಿರಾಮದ ನಂತರ ಮತ್ತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದೆ.ಹೀಗೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜಲಪಾತಗಳಿಗೆ ಜೀವಕಳೆ ಬಂದಿದೆ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ 9 ಜಲಪಾತಗಳು ಧುಮ್ಮುಕ್ಕುತ್ತಿವೆ ಅದರಲ್ಲೂ ಖಾನಾಪುರ ತಾಲೂಕಿನ ಬಟವಾಡೆ ಜಲಪಾತ ಮೈದುಂಬಿಕೊಂಡಿದೆ.ಸುಮಾರು 50 ಅಡಿ ಮೇಲಿಂದ ಹಾಲ್ನೋರೆಯಂತೆ ಜಲಪಾತದ ನೀರು ಧುಮ್ಮಿಕ್ಕುತ್ತದೆ.ನೋಡುಗರಿಗೆ ಮೇಲಿನಿಂದ ಬೀಳುತ್ತಿರುವುದು ಹಾಲೋ ಅಥವಾ ನೀರೋ ಎಂಬುವಷ್ಟರ ಮಟ್ಟಿಗೆ ಈ ದೃಶ್ಯ ರಮಣೀಯವಾಗಿರುತ್ತದೆ.ಸದ್ಯ ಜಲಪಾತಗಳಿಗೆ ಜೀವ ಕಳೆ ಬಂದರೂ ಸಹ ಇದನ್ನು ಸವಿಯುವ ಅವಕಾಶ ಬೆಳಗಾವಿ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರದ ಯಾವುದೇ ಪ್ರವಾಸಿಗರಿಗೆ ಸಿಗದಂತಾಗಿದೆ. ಬೆಳಗಾವಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮುಂಜಾಗೃತಾ ಕ್ರಮವಾಗಿ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿವೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಬಂದಿದೆ.ಬೆಳಗಾವಿ ಜಿಲ್ಲೆಯ ಜಲಪಾತಗಳ ಪ್ರವೇಶಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಲ್ಲದೇ ಜಲಪಾತಗಳು ಬಣಗುಡುತ್ತಿವೆ.ವನಸಿರಿ ಮಧ್ಯೆ ಧುಮ್ಮಿಕ್ಕುವ ಜಲವೈಭವ ನೋಡುವ ಅವಕಾಶ ಪ್ರವಾಸಿಗರಿಗೆ ಮಿಸ್ ಆಗ್ತಿದೆ ಈ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡುತ್ತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೇಫ್ ಟೂರಿಸಂ ಮಾಡುವ ಕುರಿತು ಪ್ರಸ್ತಾಪವಿಟ್ಟಿದ್ದರು. ಆ ಕುರಿತು ಅರಣ್ಯ ಇಲಾಖೆ ಮತ್ತು ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ತೀರ್ಮಾಣ ಮಾಡೋದಾಗಿ ತಿಳಿಸಿದ್ದರು. ಆದರೆ ಈವರೆಗೂ ಆ ಚಂತನೆ ಎಲ್ಲಿಗೆ ಬಂದಿದೆ ಎಂದು ಯಾರಿಗೂ ತಿಳಿದಿಲ್ಲ. ಸದ್ಯ ಪ್ರವಾಸಿಗರು ಖಾನಾಪುರ ಕಾಡಂಚಿನ ಜಲಪಾತಗಳಿಗೆ ಭೇಟಿ ನೀಡಲು ಕಾತುರರಾಗಿದ್ದು ಜಿಲ್ಲಾಡಳಿತ ಸೇಫ್ ಟೂರಿಸಂ ವ್ಯವಸ್ಥೆ ಮಾಡುವತ್ತ ಯೋಚನೆ ಮಾಡಬೇಕಿದೆ.












